ಮಧುಸೂದನ ಭಟ್ ಮಾರ್ಪಳ್ಳಿ ನಿಧನ
ಉಡುಪಿ: ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಟ್ರಸ್ಟಿಯಾಗಿ ದೇವಳದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಸೇವೆಯನ್ನು ಸಲ್ಲಿಸಿದ ಎಂ.ಮಧುಸೂದನ ಭಟ್ (84) ಮಾರ್ಪಳ್ಳಿ ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಅನಂತ ಪದ್ಮನಾಭ ಬಳಗದಲ್ಲಿ ಸಕ್ರಿಯರಾಗಿದ್ದ ಇವರು ಪತ್ನಿ, ಪುತ್ರ ಪತ್ರಿಕಾ ಏಜೆಂಟ್ ಎಂ.ಹರಿಶ್ಚಂದ್ರ ಭಟ್ ಹಾಗೂ ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.






ಸರಳ, ಸಜ್ಜನರೂ, ಶ್ರಮ ಜೀವಿಗಳೂ ಆಗಿದ್ದ ಹಿರಿಯ ಚೇತನ ಶ್ರೀಯುತ ಮಧುಸೂದನ ಭಟ್ಟರು. ಮಾರ್ಪಳ್ಳಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಯ ವಿಚಾರದಲ್ಲಿ ಇವರ ಪಾತ್ರ ನಿರ್ಣಾಯಕವಾದದ್ದು, ಕೊಡುಗೆ ಮರೆಯಲಾರದಂತಹದ್ದು!
ಶ್ರೀಯುತರ ದಿವ್ಯಾತ್ಮಕ್ಕೆ ಶ್ರೀ ಪರಮಾತ್ಮನು ಪರಮಸಾಯುಜ್ಯವನ್ನಿತ್ತು ಅನುಗ್ರಹಿಸಲಿ; ಓಂ ಶಾಂತಿ