ಶಿಕ್ಷಕಿ ನಾಗರತ್ನ ಜಿ. ಅವರಿಗೆ ‘Power Women- 2026’ ಪ್ರಶಸ್ತಿ
ಬೆಂಗಳೂರು: ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯ ವತಿಯಿಂದ “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ”ಯ ಪ್ರಯುಕ್ತ ವೆಲ್ಸ್ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ ಬಿಡದಿ, ಬೆಂಗಳೂರು ಇಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 110 ಜನ ಮಹಿಳೆಯರನ್ನು “Power Women -2026” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪಡೆದ 110 ಜನ ಮಹಿಳೆಯರಲ್ಲಿ ಶಿಕ್ಷಕಿ ನಾಗರತ್ನ ಜಿ ಕೂಡಾ ಓರ್ವರು. ಕಲೆ, ಸಾಹಿತ್ಯ, ನಿರೂಪಣೆ, ಶಿಕ್ಷಣ, ಸಾಂಸ್ಕೃತಿಕ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಅವರ ಸಾಧನೆ ಹಾಗೂ ಸಕ್ರಿಯ ಭಾಗವಹಿಸುವಿಕೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯ ಸಂಸ್ಥಾಪಕರಾದ ಮೀರ್ ಸಮೀರ್ ರಾಜಾ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಿತ್ರನಟಿಯರಾದ ಪರಿಮಳ ಜಗ್ಗೇಶ್ ಹಾಗೂ ಮೀನಾಕ್ಷಿ ಮತ್ತು ಇತ್ತೀಚೆಗೆ 216 ಗಂಟೆಗಳ ಕಾಲ ಸತತವಾಗಿ ನೃತ್ಯ ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ದಾಖಲಿಸಿದ ಉಡುಪಿಯ ದೀಕ್ಷಾ ವಿ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ಪ್ರಿಯಾ ಮತ್ತಿತರರು ಉಪಸ್ಥಿತರಿದ್ದರು.





