ಉಡುಪಿ: ಕೋವಿಡ್ -19 ನಿಯಮ ಉಲ್ಲಂಘಿಸುವ ಮದುವೆ ಹಾಲ್, ಮಾಲ್ ಗಳಿಗೆ 10 ಸಾವಿರ ರೂ. ದಂಡ ಫಿಕ್ಸ್!
ಉಡುಪಿ:(ಉಡುಪಿ ಟೈಮ್ಸ್ ವರದಿ) ಕೋವಿಡ್ -19 (ಕೋರೊನ ವೈರಾಣು ಕಾಯಿಲೆ 2019)ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೇ , ನಿಯಮಗಳನ್ನು ಪಾಲನೆ ಮಾಡದೇ ಇರುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಮಕ್ಕೆ ತಿದ್ದುಪಡಿಗಳನ್ನು ಮಾಡಿದೆ.
ಎಲ್ಲಾ ಕಿಟಕಿಗಳನ್ನು ಮುಚ್ಚಿ ಒಬ್ಬರೇ ಕಾರನ್ನು ಚಾಲನೆ ಮಾಡುವಾಗ ಅದಾಗ್ಯೂ , ಕಿಟಕಿಗಳನ್ನು ತೆರೆದಿರುವಾಗ ಸಹ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಾರ್ವಜನಿಕ ಸ್ಥಳಗಳಾದ ಹೋಟೆಲ್ , ಸಿನೆಮಾ ಥಿಯೇಟರ್, ಮಾಲ್ ಗಳು ಅಥವಾ ಅಂಗಡಿಗಳ ಆವರಣದಲ್ಲಿ ಮಾಲೀಕರು ವ್ಯವಹರಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಅಥವಾ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಇತರ ಸಡಿಲವಾದ ಬಟ್ಟೆಯಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳವುದು ಹಾಗೂ ಇತರ ವ್ಯಕ್ತಿಯಿಂದ ಕನಿಷ್ಠ 1 ಮೀಟರ್ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳವುದು.
ಈ ನಿಯಮಗಳ ಉಲ್ಲಂಘನೆ ಮಾಡಿದ ಪಕ್ಷದಲ್ಲಿ ಈ ಕೆಳಕಂಡಂತೆ ದಂಡವನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂಬ ವಿಚಾರವನ್ನು ಸಾರ್ವಜನಿಕರ ಅವಗಾಹನೆಯ ಬಗ್ಗೆ ಪ್ರಕಟಿಸಲಾಗಿದೆ.
(1) ಹವಾ ನಿಯಂತ್ರಣ ವ್ಯವಸ್ಥೆ ಇಲ್ಲದ ಪಾರ್ಟಿ ಹಾಲ್ ಗಳು , ಡಿಪಾರ್ಟ್ ಮೆಂಟಲ್ ಸ್ಟೋರ್ ಗಳು –ರೂ 5,000/
(2) ಹವಾ ನಿಯಂತ್ರಿತ ಪಾರ್ಟಿ ಹಾಲ್ ಗಳು, ಡಿಪಾರ್ಟಮೆಂಟಲ್ ಸ್ಟೋರ್ ಗಳು , ಬ್ರಾಂಡೆಡ್ ಶಾಪ್ ಗಳು(Single and Multiple brands) ಶಾಪಿಂಗ್ ಮಾಲ್ ಗಳು-ರೂ10,000/-
(3) ತ್ರಿಸ್ಟಾರ್ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಟಾರ್ ಹೋಟೆಲ್ ಗಳು , ಕನಿಷ್ಠ 500 ಜನರು ಸೇರಲು ಅವಕಾಶವಿರುವ ಮದುವೆ ಅಥವಾ ಕನ್ ವೆನ್ಷನ್ ಹಾಲ್ ಗಳು ಹಾಗೂ ಇದೇ ರೀತಿಯ ಇತರ ಸಾರ್ವಜನಿಕ ಸ್ಥಳಗಳು –ರೂ10,000/-
(4) ಸಾರ್ವಜನಿಕ ಸಮಾರಂಭಗಳ ಆಯೋಜಕರು , RALLYಗಳು , ಗುಂಪು ಸೇರುವಿಕೆ ಅಥವಾ ಆಚರಣೆಗಳು -ರೂ10,000/-.
ಜಿ. ಜಗದೀಶ, ಭಾ.ಆ.ಸೇ., ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ.