ಉಡುಪಿ: ಕೋವಿಡ್ -19 ನಿಯಮ ಉಲ್ಲಂಘಿಸುವ ಮದುವೆ ಹಾಲ್,‌ ಮಾಲ್ ಗಳಿಗೆ 10 ಸಾವಿರ ರೂ. ದಂಡ ಫಿಕ್ಸ್!

ಉಡುಪಿ:(ಉಡುಪಿ ಟೈಮ್ಸ್ ವರದಿ) ಕೋವಿಡ್ -19 (ಕೋರೊನ ವೈರಾಣು ಕಾಯಿಲೆ 2019)ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಪಾಡದೇ , ನಿಯಮಗಳನ್ನು ಪಾಲನೆ ಮಾಡದೇ ಇರುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಮಕ್ಕೆ ತಿದ್ದುಪಡಿಗಳನ್ನು ಮಾಡಿದೆ.

ಎಲ್ಲಾ ಕಿಟಕಿಗಳನ್ನು ಮುಚ್ಚಿ ಒಬ್ಬರೇ ಕಾರನ್ನು ಚಾಲನೆ ಮಾಡುವಾಗ ಅದಾಗ್ಯೂ , ಕಿಟಕಿಗಳನ್ನು ತೆರೆದಿರುವಾಗ ಸಹ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ. ಸಾರ್ವಜನಿಕ ಸ್ಥಳಗಳಾದ ಹೋಟೆಲ್‌ , ಸಿನೆಮಾ ಥಿಯೇಟರ್‌, ಮಾಲ್ ಗಳು ಅಥವಾ ಅಂಗಡಿಗಳ  ಆವರಣದಲ್ಲಿ ಮಾಲೀಕರು ವ್ಯವಹರಿಸುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು ಅಥವಾ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಇತರ ಸಡಿಲವಾದ ಬಟ್ಟೆಯಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳವುದು ಹಾಗೂ ಇತರ ವ್ಯಕ್ತಿಯಿಂದ ಕನಿಷ್ಠ 1 ಮೀಟರ್ ಸಾಮಾಜಿಕ ಅಂತರವನ್ನು  ಕಾಯ್ದುಕೊಳ್ಳವುದು.

ಈ ನಿಯಮಗಳ ಉಲ್ಲಂಘನೆ ಮಾಡಿದ ಪಕ್ಷದಲ್ಲಿ ಈ ಕೆಳಕಂಡಂತೆ ದಂಡವನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂಬ ವಿಚಾರವನ್ನು ಸಾರ್ವಜನಿಕರ ಅವಗಾಹನೆಯ ಬಗ್ಗೆ ಪ್ರಕಟಿಸಲಾಗಿದೆ.

(1) ಹವಾ ನಿಯಂತ್ರಣ ವ್ಯವಸ್ಥೆ ಇಲ್ಲದ ಪಾರ್ಟಿ ಹಾಲ್‌ ಗಳು , ಡಿಪಾರ್ಟ್ ಮೆಂಟಲ್‌ ಸ್ಟೋರ್‌ ಗಳು –ರೂ 5,000/

(2) ಹವಾ ನಿಯಂತ್ರಿತ ಪಾರ್ಟಿ ಹಾಲ್‌ ಗಳು, ಡಿಪಾರ್ಟಮೆಂಟಲ್‌  ಸ್ಟೋರ್‌ ಗಳು , ಬ್ರಾಂಡೆಡ್‌ ಶಾಪ್‌ ಗಳು(Single and  Multiple brands) ಶಾಪಿಂಗ್‌ ಮಾಲ್‌ ಗಳು-ರೂ10,000/-             

(3) ತ್ರಿಸ್ಟಾರ್‌ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಟಾರ್‌ ಹೋಟೆಲ್‌ ಗಳು , ಕನಿಷ್ಠ 500 ಜನರು ಸೇರಲು ಅವಕಾಶವಿರುವ ಮದುವೆ ಅಥವಾ ಕನ್‌ ವೆನ್‌ಷನ್‌ ಹಾಲ್ ಗಳು ಹಾಗೂ ಇದೇ ರೀತಿಯ ಇತರ ಸಾರ್ವಜನಿಕ ಸ್ಥಳಗಳು –ರೂ10,000/-           

(4) ಸಾರ್ವಜನಿಕ ಸಮಾರಂಭಗಳ ಆಯೋಜಕರು ,  RALLYಗಳು , ಗುಂಪು ಸೇರುವಿಕೆ ಅಥವಾ ಆಚರಣೆಗಳು -ರೂ10,000/-.  

ಜಿ. ಜಗದೀಶ, ಭಾ.ಆ.ಸೇ., ಜಿಲ್ಲಾ ದಂಡಾಧಿಕಾರಿ ಹಾಗೂ  ಜಿಲ್ಲಾಧಿಕಾರಿ                    ಉಡುಪಿ ಜಿಲ್ಲೆ.

Leave a Reply

Your email address will not be published. Required fields are marked *

error: Content is protected !!