ಪೆರ್ಡೂರು ರೆಸಾರ್ಟ್‌ನಲ್ಲಿ ಜೂಜಾಟ- ಪೊಲೀಸರ ದಾಳಿ: 26 ಮಂದಿ ಬಂಧನ

ಉಡುಪಿ, ಜು. 8: ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಡೂರು ಗ್ರಾಮದ ಪುತ್ತಿಗೆ ಬಳಿಯ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್‌ನ ಕೊಠಡಿಯೊಂದರಲ್ಲಿ ಅಂದರ್-ಬಾಹರ್ ಜೂಜಾಟ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 26 ಮಂದಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ₹1.31 ಲಕ್ಷ ನಗದು ಸೇರಿದಂತೆ ಒಟ್ಟು ₹17.81 ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಹಾಗೂ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜುಲೈ 7ರಂದು ರಾತ್ರಿ ಖಚಿತ ಮಾಹಿತಿ ಮೇರೆಗೆ ಹಿರಿಯಡಕ ಪೊಲೀಸರು ರೆಸಾರ್ಟ್‌ಗೆ ದಾಳಿ ನಡೆಸಿದ್ದು, ಜೂಜಾಟದಲ್ಲಿ ತೊಡಗಿದ್ದ ಸತೀಶ್ (49), ಉಳಿಯಾರುಗೋಳಿ-ಕಾಪು, ಅಕ್ಷಯ್ (31), ಮೂಡಬಿದ್ರೆ, ದಿನೇಶ್, ಕಾಪು, ಮಾಧವ ಪೂಜಾರಿ, ಬೆಳಪು, ಪ್ರಶಾಂತ್, ಕಾಪು, ಅಕ್ಷಯ್, ಕಾಪು, ದಿನೇಶ್, ಕಾಪು, ಭರತ್, ಕಾಪು, ಸಂತೋಷ್, ಕಣಜಾರು, ಅರುಣ್, ಕಾಪು, ರೋಶನ್, ಕಾಪು, ಚರಣ್, ಕಾಪು, ಲೋಹಿತ್, ಮೂಡಬಿದ್ರೆ, ಶಿವ, ಉಚ್ಚಿಲ, ಮನೀಶ್, ಕಾಪು, ರಂಜಿತ್, ಕಾಪು, ಯಾದವ್, ಕಾಪು, ಪೃಥ್ವಿನ್, ಕಾಪು, ಶಿವ, ಕಾಪು, ದೀಪಕ್, ಕಾಪು, ವಿತೇಶ್, ಕಾಪು, ಅಬ್ದುಲ್ ಹಮೀದ್, ಶಿರ್ವ, ಹರೂನ್, ಶಿರ್ವ, ಕೃಷ್ಣ, ಕಾಪು, ಅಶೋಕ್, ಉಡುಪಿ ಹಾಗೂ ಶೈಲೇಶ್ ಅವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

ದಾಳಿಯ ವೇಳೆ ಜೂಜಾಟಕ್ಕೆ ಬಳಸಲಾಗುತ್ತಿದ್ದ ₹1,31,630 ನಗದು, ಇಸ್ಪೀಟ್ ಎಲೆಗಳು, 25 ವಿವಿಧ ಕಂಪನಿಗಳ ಮೊಬೈಲ್ ಫೋನ್‌ಗಳು (ಅಂದಾಜು ಮೌಲ್ಯ ₹2 ಲಕ್ಷ), ಐದು ಕಾರುಗಳು ಹಾಗೂ ಮೂರು ಮೋಟಾರ್ ಸೈಕಲ್‌ಗಳು (ಅಂದಾಜು ಮೌಲ್ಯ ₹14.50 ಲಕ್ಷ), ಜೂಜಾಟಕ್ಕೆ ಬಳಸಲಾಗಿದ್ದ ಟೇಬಲ್ ಹಾಗೂ ಕುರ್ಚಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸ್ವತ್ತುಗಳ ಮೌಲ್ಯ ₹16.50 ಲಕ್ಷವಾಗಿದ್ದು, ನಗದು ಸೇರಿ ಒಟ್ಟು ₹17,81,630 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಅಲ್ಲದೆ, ಜೂಜಾಟಕ್ಕೆ ಅವಕಾಶ ಕಲ್ಪಿಸಿದ ಆರೋಪದ ಹಿನ್ನೆಲೆಯಲ್ಲಿ ಪೆರ್ಡೂರು ಗ್ರಾಮದ ಪುತ್ತಿಗೆ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್‌ನ ಪರವಾನಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ. ಹಾಗೂ ಪ್ರಭಾರ ಪೊಲೀಸ್ ಉಪಾಧೀಕ್ಷಕರಾದ ವಿಜಯಪ್ರಸಾದ್ ಅವರ ನಿರ್ದೇಶನದಂತೆ, ಬ್ರಹ್ಮಾವರ ವೃತ್ತದ ಪೊಲೀಸ್ ನಿರೀಕ್ಷಕ ಗೋಪೀಕೃಷ್ಣ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ಹಿರಿಯಡಕ ಪೊಲೀಸ್ ಠಾಣೆಯ ಪಿಎಸ್‌ಐ ಪುನೀತ್ ಕುಮಾರ್ ಬಿ.ಇ. (ಕಾನೂನು ಮತ್ತು ಸುವ್ಯವಸ್ಥೆ), ಪಿಎಸ್‌ಐ ವಿಠ್ಠಲ ಮಲವಡಕರ (ತನಿಖೆ) ಹಾಗೂ ಸಿಬ್ಬಂದಿಗಳಾದ ಪ್ರವೀಣ್ ರೈ, ಪ್ರವೀಣ್ ಶೆಟ್ಟಿ, ಯತೀಶ್, ಕೃಷ್ಣ ಪೂಜಾರಿ, ಉಲ್ಲಾಸ್, ಚನ್ನೇಶ್, ಕಾರ್ತಿಕ್ ಹಾಗೂ ಜೀಪ್ ಚಾಲಕ ಶಾಂತರಾಮ್ ಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿತರನ್ನು ಬಂಧಿಸುವಲ್ಲಿ ಹಾಗೂ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

Leave a Reply

Your email address will not be published. Required fields are marked *

error: Content is protected !!