ಉಡುಪಿ: ಬಿಆರ್’ಎಸ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ವಚ್ಚತಾ ಸಿಬ್ಬಂದಿಗಳ ದಿಢೀರ್ ಪ್ರತಿಭಟನೆ
ಉಡುಪಿ: ಕಳೆದ ಹಲವು ತಿಂಗಳಿನಿಂದ ವೇತನ ಪಾವತಿಸದೆ ದುಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಇಂದು ಕೂಸಮ್ಮ ಶಂಭು ಶೆಟ್ಟಿ ಮತ್ತು ಹಾಜಿ ಅಬ್ದುಲ್ಲಾ ಸ್ಮಾರಕ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯ ಸ್ವಚ್ಚತಾ ಸಿಬ್ಬಂದಿಗಳು ಪ್ರತಿಭಟನೆಗೆ ಇಳಿದಿದ್ದಾರೆ.
ವೇತನ ಪಾವತಿಸದಿರುವ ಬಗ್ಗೆ ಜಿಲ್ಲಾಧಿಕಾರಿ, ಕಾರ್ಮಿಕ ಇಲಾಖೆ ಹೀಗೆ ಸಂಬಂದ ಪಟ್ಟ ಎಲ್ಲರಿಗೂ ದೂರು ನೀಡದರೂ ಯಾವುದೇ ಪ್ರಯೋಜನವಾಗದಿರುವುದನ್ನು ಮನಗಂಡ ಕಾರ್ಮಿಕರು ಆಸ್ಪತ್ರೆಯ ಮುಂಭಾಗವೇ ಧರಣಿ ಕೈಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಸಿಬ್ಬಂಧಿಗಳು, ಕೋರೋನಾ ಕಾರಣ ಮಾಸಿಕ 12,000 ಬದಲಾಗಿ 5,000 ಮಾತ್ರ ವೇತನ ನೀಡಲಾಗುತ್ತಿತ್ತು.
ಆದರೆ, ಕಳೆದ ಮೂರು ತಿಂಗಳಿನಿಂದ ಯಾವುದೇ ವೇತನ ಬಂದಿಲ್ಲ. ಈ ಬಗ್ಗೆ ಕೇಳಿದರೆ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ದಿನ ದೂಡುತ್ತಿದ್ದಾರೆಯೇ ವಿನಹ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ಇದೀಗ ಆಡಳಿತ ಮಂಡಳಿಯ ಈ ನಡೆಯನ್ನು ವಿರೊಧಿಸಿ ಪ್ರತಿಭಟಿಸುತ್ತಿದ್ದರೂ ಕೂಡಾ ಯಾರೂ ಬಂದು ನಮ್ಮ ಸಮಸ್ಯೆಯುನ್ನು ಆಲಿಸುತ್ತಿಲ್ಲ. ಯಾಕಾಗಿ ಪ್ರತಿಭಟನೆ ನಡೆಸುತ್ತಿದ್ದೀರ ಎಂದು ಯಾರೂ ವಿಚರಿಸುತ್ತಿಲ್ಲ, ನಮ್ಮ ಸಮಸ್ಯೆ ಏನು ಎಂಬುದನ್ನು ಕೇಳುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಲ್ಲದೆ ಈ ಬಗ್ಗೆ ಆಡಳಿತ ಮಂಡಳಿಯನ್ನು ಕೇಳಿದರೆ ಕೆಲಸ ಕಳೆದುಕೊಳ್ಳು ಭೀತಿಯೂ ಇದೆ. ಈಗಾಗಲೇ ವೇತನ ಪಾವತಿಯಾಗದ ಹಿನ್ನೆಲೆ ಹೆಚ್ಚಿನ ಸಿಬ್ಬಂದಿ ಕೆಲಸಕ್ಕೆ ಹಾಜರಾಗುತ್ತಿಲ್ಲ, ಸದ್ಯ ಆಸ್ಪತ್ರೆಯಲ್ಲಿ ಕೇವಲ 30 ಮಂದಿ ಮಾತ್ರ ಸಿಬ್ಬಂಧಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಒತ್ತಡದಲ್ಲಿ ಕೆಲಸಮಾಡಬೇಕಾದ ಸ್ಥಿತಿ ಎದುರಾಗಿದೆ. ಹೀಗಿದ್ದರೂ ಈ ಬಗ್ಗೆ ಯವುದೇ ಕ್ರಮ ಕೈಗೊಂಡಿಲ್ಲ ಎಂದು ಸಮಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಇನ್ನಾದರೂ ಸಂಬಂಧ ಪಟ್ಟವರು ಈ ಬಗ್ಗೆ ಕ್ರಮ ಕೈಗೊಂಡು ನಮ್ಮ ಸಮಸ್ಯೆಗೆ ಸ್ಪಂದಿಸುವಂತಾಗಲಿ ಎಂದು ಧರಣಿ ನಿರತರು ಆಗ್ರಹಿಸಿದ್ದಾರೆ.