ಪ್ರಸಾದ್ ನೇತ್ರಾಲಯ ಉಡುಪಿ: ವೈದ್ಯರದಿನಾಚರಣೆ
ಉಡುಪಿ: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಯಿತು.
ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಅಶೋಕ್ ಕುಮಾರ್ ಎಚ್ ಹಾಗೂ ಮಕ್ಕಳ ತಜ್ಞ ಹಾಗೂ ಐಎಂಎ ಉಡುಪಿ ಕರಾವಳಿಯ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡುತ್ತಾ ವೈದ್ಯರುಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಇವುಗಳ ನಿವಾರಣೆಯ ಕುರಿತು ಸರಕಾರ ಗಮನಿಸಬಹುದಾದ ಅಂಶಗಳ ಬಗ್ಗೆ ವಿವರಿಸಿದರು.
ಜಿಲ್ಲಾ ಸರ್ಜನ್ ಡಾ.ಅಶೋಕ್ ಕುಮಾರ್ ಅವರು ಮಾತನಾಡುತ್ತಾ ಯಾವುದೇ ಶುಶ್ರೂಷಾ ಪದ್ಧತಿಯ ಬೇಧವಿಲ್ಲದೇ ಎಲ್ಲಾ ವೈದ್ಯರನ್ನು ಪ್ರಸಾದ್ ನೇತ್ರಾಲಯ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಐಎಂಎ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಅವರು ಮಾತನಾಡುತ್ತಾ ವೈದ್ಯರಿಗೆ ಸಮಸ್ಯೆ ಬಂದಾಗ ಒಗ್ಗಟ್ಟಾಗಿ ಹೋರಾಡುವುದು ಇಂದಿನ ಅಗತ್ಯ ಎಂದರು. ಪೆರ್ಡೂರಿನ ಡಾ . ಜಿ ಎಸ್ ಕೆ ಭಟ್, ಶಸ್ತ್ರ ಚಿಕಿತ್ಸಕ ಡಾ. ವೈ ಸುದರ್ಶನ್ ರಾವ್., ಸಾಸ್ತಾನದ ಡಾ .ಹೇಮಂತ್ ಕುಮಾರ್., ಭಟ್ಕಳದ ಡಾ. ವಿಶ್ವನಾಥ್ ನಾಯಕ್, ತೆಕ್ಕಟ್ಟೆಯ ಡಾ. ಕುಸುಮಾಕರ್ ಶೆಟ್ಟಿ., ಕುಕ್ಕಿಕಟ್ಟೆಯ ಡಾ. ಮನಮೋಹನ ಶೆಟ್ಟಿ, ಉಡುಪಿಯ ಡಾ. ನರೇಂದ್ರ ಶೆಣೈ, ಪ್ರಸಾದ್ ನೇತ್ರಾಲಯದ ನೇತ್ರ ತಜ್ಞರುಗಳಾದ ಡಾ. ಪರೇಶ್ ಪೂಜಾರಿ, ಡಾ. ಶಮಂತ್ ಶೆಟ್ಟಿ, ಡಾ. ಜಾಕೋಬ್ ಚಾಕೋ, ಡಾ. ಅಪರ್ಣಾ ನಾಯಕ್, ಡಾ. ಸಚಿನ್, ಡಾ. ರಿಯಾ ಬಾತ್ರಾ ಇವರನ್ನು ಸನ್ಮಾನಿಸಲಾಯಿತು. ಪ್ರಸಾದ್ ನೇತ್ರಾಲಯ ಆಡಳಿತ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್ ಹಾಗೂ ಎಲ್ಲಾ ವೈದ್ಯರುಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯ ಆಡಳಿತಾಧಿಕಾರಿ ಎಂ. ವಿ. ಆಚಾರ್ಯರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.





