ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ: ಉಚಿತ ಕನ್ನಡಕ ವಿತರಣೆ

ಬ್ರಹ್ಮಾವರ: ಗೆಳೆಯರ ಬಳಗ ಕನ್ನಾರು ಇವರ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವರಿಂದ ನಡೆದ ಉಚಿತ ನೇತ್ರ ತಪಾಸಣೆ ಶಿಬಿರದ ಪ್ರಯುಕ್ತ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಉದ್ಘಾಟಿಸಿ, ಹಳ್ಳಿ ಹಳ್ಳಿಗೆ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರ ತಂಡ ಹೋಗಿ ಉಚಿತ ಕ್ಯಾಂಪ್ ಮಾಡುವುದರಿಂದ ನಿರ್ಗತಿಕರು ಹಾಗೂ ಅಸಹಾಯಕರಿಗೆ ಮನೆ ಬಾಗಿಲಿಗೆ ಹೋಗಿ ಸಹಾಯ ಮಾಡಿದಂತಾಗುತ್ತದೆ. ಇದರಿಂದ ಅದೆಷ್ಟೋ ಜನರ ಬಾಳಲ್ಲಿ ಬೆಳಕಾಗಿದ್ದಾರೆ ಎಂದರು.

ಡಾ.ಕೃಷ್ಣ ಪ್ರಸಾದ್ ಕೂಡ್ಲು ಮಾತಾಡಿ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಸಂಸದ ಶ್ರೀ ನಿವಾಸ್ ಪೂಜಾರಿಯವರು ಹೇಳಿದ ಸ್ಥಳದಲ್ಲಿ ಉಚಿತ ಶಿಬಿರ ಮತ್ತು ಅವರು ಗುರುತಿಸಿದ ಬಡ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದರು. ಸುಮಾರು 150 ಕನ್ನಡಕವನ್ನು ಪ್ರಸಾದ್ ನೇತ್ರಾಲಯ ಹಾಗು ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ನೀಡಲಾಯಿತು.

ಈ ಸಂಧರ್ಭದಲ್ಲಿ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗೆಳೆಯರ ಬಳಗ ಕನ್ನಾರು ಇದರ ಅಧ್ಯಕ್ಷ ಭಾಸ್ಕರ್ ಆಚಾರ್ಯ, ಜಿಲ್ಲಾಪಂಚಾಯತ್ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಳಿ, ಬ್ರಹ್ಮಾವರ ವ್ಯ.ಸೇವಾ ಸಹಕಾರಿಸಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ಉದ್ಯಮಿ ಧನಂಜಯ್ ಅಮೀನ್, ತಾಲೂಕು ಉತ್ಪನ್ನ ಮಾರಾಟ ಸಂಘದ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ. ಚೇರ್ಕಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹರೀಶ್ ಶೆಟ್ಟಿ ಚೇರ್ಕಾಡಿ.ಪಂಚಾಯತ್ ಮಾಜಿ ಸದಸ್ಯರಾದ ರಾಧಾಕೃಷ್ಣ ಸಾಮಂತ, ರಾಜು ಮಡಿವಾಳ, ಗೌರವ ಅಧ್ಯಕ್ಷರಾದ ಶೇಖರ್ ಕುಲಾಲ್ ಕನ್ನಾರು, ಕಾರ್ಯಕ್ರಮ ಸಂಚಾಲಕರಾದ ಸುರೇಶ ಆಚಾರ್ಯ ಪೇತ್ರಿ ಉಪಸ್ಥಿತರಿದ್ದರು.ಸಂಘದ ಖಜಾಂಚಿ ಸಂತೋಷ ನಾಯ್ಕ್ ಕನ್ನಾರ ಸನ್ಮಾನ ಪತ್ರವಾಚಿಸಿದರು. ಕಾರ್ಯಕ್ರಮ ಸಹ ಸಂಚಾಲಕ ಗಣೇಶ್ ಕುಲಾಲ್ ಆರೂರು ಸ್ವಾಗತಿಸಿ, ಉಮೇಶ್ ಪೂಜಾರ್ ಬ್ರಹ್ಮಾವರ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!