ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತಸಹಾಯಕ ಸಂಶಯಾಸ್ಪದವಾಗಿ ಗೋವಾದಲ್ಲಿ ಮೃತ್ಯು?
Screenshot
ಉಡುಪಿ: ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಸಂದೀಪ್ ಸಾಲ್ಯಾನ್ (40) ಗೋವಾದ ಕಲ್ಲಂಗೂಟ್ ಬೀಚ್ ಬಳಿಯ ಗೆಸ್ಟ್ ಹೌಸಿನಲ್ಲಿ ನಿನ್ನೆ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಸಂದೀಪ್ ಅವರು ಮೂಲತಃ ಮಲ್ಪೆಯವರೆಂದು ತಿಳಿದು ಬಂದಿದೆ.
ಪ್ರಮೋದ್ ಅವರ ಸಹಾಯಕರಾಗಿದ್ದ ಇವರು ಹಲವಾರು ವರ್ಷಗಳ ಹಿಂದೆಯೇ ಕೆಲಸ ತೊರೆದಿದ್ದ ಸಂದೀಪ್ ಪ್ರಸ್ತುತ ಮಲ್ಪೆಯಲ್ಲಿ ಪ್ರವಾಸೀ ಬೋಟ್ ಹೊಂದಿದ್ದರೆನ್ನಲಾಗಿದೆ.
ಮೂರು ದಿನಗಳ ಹಿಂದೆ ಪ್ರವಾಸಕ್ಕೆಂದು ಗೋವಾಕ್ಕೆ ತೆರಳಿದ್ದ ಸಂದೀಪ್ ಹಠಾತ್ತಾಗಿ ಸಾವನ್ನಪ್ಪಿರುವುದು ಆತಂಕ ಸೃಷ್ಟಿಸಿದ್ದು, ಹೃದಯಾಘಾತವೊ ಅಥವಾ ಕೊಲೆಯೋ ಎಂಬ ಬಗ್ಗೆ ಸಂಶಯಗಳೆದ್ದಿವೆ.





