ವಿಜಯ ವೀರ ಸಂಘ ಚಿಟ್ಪಾಡಿ- ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕೆ ಶಿಬಿರ
ಉಡುಪಿ: ವಿಜಯ ವೀರ ಸಂಘ ಚಿಟ್ಪಾಡಿ-ಬೈಲೂರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಪಶುವೈದ್ಯಕೀಯ ಪಾಲಿಕ್ಲಿನಿಕ್, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸಾಕು ನಾಯಿ ಹಾಗೂ ಬೀದಿ ನಾಯಿಗಳಿಗೆ ಉಚಿತ ರೇಬಿಸ್ ಲಸಿಕೆ ಶಿಬಿರ ಕಾರ್ಯಕ್ರಮವು ವಿಜಯ ವೀರ ಸಂಘದ ವಠಾರದಲ್ಲಿ ಭಾನುವಾರ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಪಶು ಸಂಗೋಪನೆ ಇಲಾಖೆಯ ಮುಖ್ಯಸ್ಥರಾದ ಡಾ. ಬಾಬಣ್ಣ ಪೂಜಾರಿ, ಡಾ. ಪ್ರಶಾಂತ್ ಶೆಟ್ಟಿ, ಡಾ.ರೆಡ್ಡಪ್ಪ ಹಾಗೂ ವಿಜಯ ವೀರ ಸಂಘದ ಅಧ್ಯಕ್ಷ ಡೆನ್ನೀಸ್ ಡಿ’ಸೋಜಾ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ವಿಜಯ ವೀರ ಸಂಘದ ಗೌರವಾಧ್ಯಕ್ಷರಾದ ಚಂದ್ರಮೋಹನ್ ಚಿಟ್ಪಾಡಿ, ಉಪಾಧ್ಯಕ್ಷರಾದ ಗುರುಪ್ರಸಾದ್ ಪೂಜಾರಿ, ನಿರಂಜನ್ ಬೇಕಲ್, ಪ್ರಧಾನ ಕಾರ್ಯದರ್ಶಿ ಸಂಜಯ್ ಆಚಾರ್ಯ, ಕೋಶಾಧಿಕಾರಿ ರಾಘವೇಂದ್ರ ಪೂಜಾರಿ, ಕಲಾ ಕಾರ್ಯದರ್ಶಿ ಮೈಕಲ್ ಡಿ’ಸೋಜಾ, ಕ್ರೀಡಾ ಕಾರ್ಯದರ್ಶಿಗಳಾದ ಪ್ರೀತಮ್ ಹಾಗೂ ಶೆಲ್ಡನ್, ಗೌರವ ಸಲಹೆಗಾರರಾದ ರಾಜ್‌ಕುಮಾರ್ ಪೂಜಾರಿ, ಡೇನಿಸ್ ಡಿ’ಸೋಜಾ, ಪುಷ್ಪರಾಜ್, ಲ್ಯಾನ್ಸಿ ಡಿ’ಸೋಜಾ, ಪ್ರಮೋದ್ ಉಳ್ಳಾಲ್, ಕೆವಿನ್, ಸಾದಿಕ್, ದಿನೇಶ್ ನಾಯ್ಕ್, ರೆಹಮತ್, ಸುರೇಶ್ ಶೆಟ್ಟಿ, ಅನ್ವರ್ ಸಾಹೇಬ್, ಸ್ಟೀವನ್, ಯೋಗೀಶ್ ಬಂಗೇರ, ಖಲೀಲ್ ಸಾಹೇಬ್, ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿಯ ಸಿಬ್ಬಂದಿಗಳು, ಊರಿನ ನಾಗರಿಕರು ಹಾಗೂ ಶ್ವಾನ ಪ್ರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಚಿಟ್ಪಾಡಿ ಸುತ್ತ ಮುತ್ತಲಿನ ಪರಿಸರದ 100ಕ್ಕೂ ಮಿಕ್ಕಿ ಬೀದಿ ನಾಯಿ, ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ವಿಜಯ ವೀರ ಸಂಘದ ವಠಾರದಲ್ಲಿ ಹಾಗೂ ಅವರವರ ಮನೆ ಮನೆಗೆ ತೆರಳಿ ರೇಬಿಸ್ ಲಸಿಕೆ ಹಾಕಿಸಲಾಯಿತು.





