ಪಿಎಂ ಕೇರ್ಸ್ ಫಂಡ್ ನಲ್ಲಿ ಅಕ್ರಮದ ಶಂಕೆ: ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಯನ್ನೇ ಎಸೆದ ಕಾಂಗ್ರೆಸ್

ನವದೆಹಲಿ: ಪಿಎಂ ಕೇರ್ಸ್ ಫಂಡ್ ಬಗ್ಗೆ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಭಾರತೀಯ ರಾಯಭಾರಿಗಳ ಮೂಲಕ ಪಿಎಂ ಕೇರ್ಸ್ ಫಂಡ್ ಮೂಲಕ ಹಣ ಸಂದಾಯವಾದ ಬಗ್ಗೆ ಸಹ ಮಾಹಿತಿ ನೀಡಿ ಎಂದು ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೆವಾಲಾ ಒತ್ತಾಯಿಸಿದ್ದಾರೆ.

ಚೀನಾ, ಪಾಕಿಸ್ತಾನ ಮತ್ತು ಕತಾರ್ ಸೇರಿದಂತೆ ಹಲವು ದೇಶಗಳಿಂದ ಪಿಎಂ ಕೇರ್ಸ್ ಫಂಡ್ ಗೆ ಹಣ ಸಂದಾಯವಾಗಿದೆ ಇಂತಹ ಸಂದರ್ಭದಲ್ಲಿ ಪ್ರಧಾನಿಯವರಿಗೆ ಕೇಳುವ ಪ್ರಶ್ನೆಗಳು, ಪಿಎಂ ಕೇರ್ಸ್ ಫಂಡ್ ಗೆ ಭಾರತೀಯ ರಾಯಭಾರಿಗಳು ಹಣವನ್ನು ಏಕೆ ಪಡೆಯಬೇಕು, ಚೀನಾದ ನಿಷೇಧಿತ ಆಪ್ ಗಳನ್ನು ಏಕೆ ಜಾಹೀರಾತು ಮಾಡಲಾಯಿತು ಎಂದು ಸುರ್ಜೆವಾಲ್ ಪ್ರಶ್ನಿಸಿದ್ದಾರೆ.

ಪಾಕಿಸ್ತಾನದಿಂದ ಈ ಫಂಡ್ ಗೆ ಬಂದಿರುವ ಹಣವೆಷ್ಟು, ಅದನ್ನು ಕೊಟ್ಟವರು ಯಾರು ಮತ್ತು ಕತಾರ್ ನಿಂದ ಹಣ ಸಂದಾಯ ಮಾಡಿರುವವರು ಯಾರು ಮತ್ತು ಎಷ್ಟು ಕೋಟಿ ಪಡೆಯಲಾಗಿದೆ ಎಂದು ಸರ್ಕಾರ ಬಹಿರಂಗಪಡಿಸಬೇಕು ಎಂದು ಕೇಳಿದ್ದಾರೆ.

27 ವಿದೇಶಿ ರಾಷ್ಟ್ರಗಳಿಂದ ಎಷ್ಟು ಸಾವಿರಾರು ಕೋಟಿ ರೂಪಾಯಿಗಳು ಬಂದಿವೆ, ಈ 27 ರಾಷ್ಟ್ರಗಳಿಂದ ಬಂದ ಹಣವನ್ನು ರಹಸ್ಯವಾಗಿ ಏಕೆ ಇಡಲಾಗಿದೆ, ಸಾರ್ವಜನಿಕವಾಗಿ ಏಕೆ ಬಹಿರಂಗಪಡಿಸಿಲ್ಲ, ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಪ್ರಾಧಿಕಾರದ ಮೂಲಕ ಏಕೆ ಈ ಬಗ್ಗೆ ಮಾಹಿತಿ ಸಿಗುತ್ತಿಲ್ಲ ಎಂದು ಸುರ್ಜೆವಾಲಾ ಟ್ವೀಟ್ ಮೂಲಕ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಸಿಎಜಿ(ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ) ಅಥವಾ ಭಾರತ ಸರ್ಕಾರ ಏಕೆ ಹಣದ ಲೆಕ್ಕಪರಿಶೋಧನೆ ನಡೆಸಿಲ್ಲ ಎಂದು ಕೇಳಿದ್ದಾರೆ.

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಬಂದು ತೀವ್ರ ಆರ್ಥಿಕ ಸಂಕಷ್ಟ ಉಂಟಾದ ಹಿನ್ನೆಲೆ ಯಲ್ಲಿ, ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಅಥವಾ ಇನ್ನಾವುದೇ ರೀತಿಯ ಪರಿಹಾರ ಅಥವಾ ಸಹಾಯವನ್ನು ಕೈಗೊಳ್ಳಲು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಯಲ್ಲಿ (PM -CARES fund) ಸ್ಥಾಪಿಸಲಾಗಿದೆ. 

Leave a Reply

Your email address will not be published. Required fields are marked *

error: Content is protected !!