ಎಸ್‌ಎಸ್‌ಎಲ್‌ಸಿ ಪರೀಕ್ಷೆ ಖಾಸಗಿಯಾಗಿ ಬರೆಯುವ ವಿದ್ಯಾರ್ಥಿಗಳಿಗೆ ಮರೀಚಿಕೆಯಾದ ಪಠ್ಯ ಪುಸ್ತಕಗಳು…

Oplus_131072

ಉಡುಪಿ: ಒಂದು ಕಾಲದಲ್ಲಿ ಒಂದನೇ ತರಗತಿಯಿಂದ ಡಿಗ್ರಿ ಯವರೆಗಿನ ಯಾವುದೆ ಪಠ್ಯ ಪುಸ್ತಕಗಳು ಎಲ್ಲಾ ಪುಸ್ತಕದ ಮಳಿಗೆ, ಅಂಗಡಿಗಳಲ್ಲಿ ಸಿಗುತ್ತಿದ್ದವು. ಓದ ಬಯಸುವ ಯಾವುದೇ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳ ಆಭಾವ ಕಾಣುತ್ತಿರಲಿಲ್ಲ. ಮುಂದೆ ಈ ವ್ಯವಸ್ಥೆ ಬದಲಾಗಿ ಪಠ್ಯ ಪುಸ್ತಕಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ನೇರವಾಗಿ ಶಾಲೆಗಳಿಗೆ ಅವಶ್ಯಕತೆಗೆ ತಕ್ಕಂತೆ ಬೇಡಿಕೆಯನ್ನು ಪ್ರತಿ ಶಾಲೆಯಿಂದ ಪಡೆದು ಖಾಸಗಿ ಶಾಲೆಗಳಿಗೆ ಹಣ ಪಡೆದು, ಸರಕಾರಿ ಶಾಲೆಗಳಿಗೆ ಉಚಿತವಾಗಿ ವಿತರಿಸುವ ಕ್ರಮವನ್ನು ಕರ್ನಾಟಕ ಶಿಕ್ಷಣ ಇಲಾಖೆ ಪ್ರಾರಂಭಿಸಿತು.

ರಾಜ್ಯದಲ್ಲಿ ಪ್ರತಿ ವರ್ಷ ಉದ್ಯೊಗದಲ್ಲಿರುವ, ಶಾಲೆಯಿಂದ ದೂರ ಉಳಿದ, ಅನುತ್ತೀರ್ಣಗೊಂಡು ಶಾಲೆಗೆ ಪ್ರವೇಶ ಪಡೆಯದ ಅದೇಷ್ಟೋ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆಯುತ್ತಾರೆ.ಈ ಬಾರಿ 27,189 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆದಿದ್ದಾರೆ ಇವರಿಗೆ ಪಠ್ಯ ಪುಸ್ತಕಗಳು ನೀಡುವವರು ಯಾರು ಎಂಬ ಪ್ರಶ್ನೆ ಬಂದಾಗ ಖಾಸಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಟ್ಯುಟೋರಿಯಲ್ ಕಾಲೇಜುಗಳಿಗೆ ಸ್ಪೆಷಲ್ ಇಂಡೆಂಟ್ ಮೂಲಕ ಬೇಡಿಕೆ ಪಡೆದು ಮಾರಾಟ ಮಾಡಲಾಗುತ್ತಿತ್ತು.

ಈ ಬಾರಿ ಸ್ಪೆಷಲ್ ಇಂಡೆಂಟ್‌ಗೆ ಶಿಕ್ಷಣ ಇಲಾಖೆ ಅವಕಾಶ ನೀಡದೆ ಇರುವುದರಿಂದ ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಸಿಗದೆ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು. ಓರ್ವ ವಿದ್ಯಾರ್ಥಿ ಪರೀಕ್ಷೆ ಬರೆಯುವಾಗ ಆತನಿಗೆ ಪೂರ್ವ ತಯಾರಿಗೆ ಅಗತ್ಯವಾದ ಪರಿಕರಗಳನ್ನು ಒದಗಿಸಬೇಕಾಗಿದೆ. ಖಾಸಗಿ, ಪುನರಾವರ್ತಿತ ವಿದ್ಯಾರ್ಥಿ ಗಳಿಗೆ ಪಠ್ಯ ಪುಸ್ತಕಗಳು ಸಿಗುವಂತೆ ವ್ಯವಸ್ಥೆ ಮಾಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ವಿನಂತಿಸುತ್ತೇನೆ- ಉಮೇಶ್ ಎ. ನಾಯ್ಕ್ ಚೇರ್ಕಾಡಿ ಪ್ರಾಂಶುಪಾಲರು, ಸ್ನೇಹ ಟ್ಯುಟೋರಿಯಲ್ ಕಾಲೇಜು,ಉಡುಪಿ

Leave a Reply

Your email address will not be published. Required fields are marked *

error: Content is protected !!