ಹೆಬ್ರಿ: ಮಲ್ಲಿಕಾ ಶೆಟ್ಟಿ ನಿಧನ
ಉಡುಪಿ: ಹೆಬ್ರಿಯ ಪ್ರತಿಷ್ಠಿತ ಎಪಿಎಂ ಸಮೂಹ ಸಂಸ್ಥೆಯ ಸ್ಥಾಪಕರಾಗಿದ್ದ ದಿ. ಸುಭೋದ್ ಬಲ್ಲಾಳ್ ಅವರ ಪುತ್ರಿ ಡಾಕ್ಟರ್ ಸುಮಂತ್ ಶೆಟ್ಟಿ ಅವರ ಧರ್ಮಪತ್ನಿ ಮಲ್ಲಿಕಾ ಶೆಟ್ಟಿ(67) ಅವರು ತಡರಾತ್ರಿ 12:30 ಗಂಟೆಗೆ ನಿಧನರಾಗಿದ್ದಾರೆ.
ಮೃತರು ಪತಿ ಹಾಗೂ ಎರಡು ಗಂಡು ಮಕ್ಕಳನ್ನು ಹಾಗೂ ಸಹೋದರರಾದ ಪ್ರವೀಣ್ ಬಲ್ಲಾಳ್ ಹಾಗೂ ಪ್ರಸಾದ್ ಬಲ್ಲಾಳ್ ಅವರನ್ನು ಹಾಗೂ ಅಪರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ ನಾಲ್ಕು ಗಂಟೆಗೆ ಹೆಬ್ರಿಯಲ್ಲಿ ನಡೆಯಲಿದೆಂದು ಕುಟುಂಬ ಮೂಲಗಳು ತಿಳಿಸಿವೆ.





