ಮಣಿಪಾಲ: ಪೆಸ್ಟ್ ಕಂಟ್ರೋಲ್ ಗೋಡೌನ್‌ನಲ್ಲಿ ಉದ್ಯೋಗಿ ಆತ್ಮಹತ್ಯೆ

ಮಣಿಪಾಲ: ಪೆಸ್ಟ್ ಕಂಟ್ರೋಲ್ ಸಂಸ್ಥೆಯ ಉದ್ಯೋಗಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅರುಣ್ ಶೆಟ್ಟಿಗಾರ್ (40) ಪೆಸ್ಟ್ ಕಂಟ್ರೋಲ್ ಗೋಡೌನ್‌ನಲ್ಲಿದ್ದ ಪ್ಯಾನ್‌ನ ಕಬ್ಬಿಣದ ಹುಕ್ಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಆತ್ರಾಡಿಯ ಲೋಲಾಕ್ಷಿ ಶೆಟ್ಟಿಗಾರ್ ಅವರು ನೀಡಿದ ಮಾಹಿತಿಯಂತೆ, ಅರುಣ್ ಶೆಟ್ಟಿಗಾರ್ ಅವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಜೂನ್ 16ರಂದು ರಾತ್ರಿ 8 ಗಂಟೆಯಿಂದ ಜೂನ್ 17ರಂದು ಬೆಳಿಗ್ಗೆ 10 ಗಂಟೆಯ ನಡುವಿನ ಅವಧಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿರುವುದಾಗಿ ದೂರು ದಾಖಲಾಗಿದೆ ‌

ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 33/2026ರಡಿ ಕಲಂ 194 ಬಿಎನ್‌ಎಸ್‌ಎಸ್ ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!