ಕೊಡವೂರು: ದೇವಸ್ಥಾನದ ಮೇಲುಸ್ತುವಾರಿ ನಾಪತ್ತೆ
ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟ ಕೃಷ್ಣ (49) ಎಂಬವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಅವರು ಈ ಕುರಿತು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಹಿನ್ನಲೆ.
ದೂರುದಾರರಾದ ಪ್ರಕಾಶ್ ಅವರ ಪ್ರಕಾರ ಜೂನ್ 12, 2026ರಂದು ಬೆಳಿಗ್ಗೆ ಗಂಟೆ 8:0ಕ್ಕೆ ವೆಂಕಟ ಕೃಷ್ಣ ಅವರು ಕೊಡವೂರು ಕೆರೆಕಟ್ಟೆ ಗಣಪತಿ ದೇವಸ್ಥಾನದಿಂದ ಹೊರಟಿದ್ದರು. ಆದರೆ ಅದಾದ ಬಳಿಕ ಅವರು ಶಂಕರನಾರಾಯಣ ದೇವಸ್ಥಾನಕ್ಕೂ ಬಾರದೇ ಇತ್ತ ತಮ್ಮ ಮನೆಗೂ ಮರಳದೆ ನಾಪತ್ತೆಯಾಗಿದ್ದಾರೆ.
ಬಂದು ಮಿತ್ರರು ಹಾಗೂ ಪರಿಚಿತರ ಜಾಗಗಳಲ್ಲಿ ಹುಡುಕಾಟ ನಡೆಸಿದರು ಅವರು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





