ಸುಧಾಕರ ಶ್ರೀಯಾನ್ ಗುಂಡಿಬೈಲು ನಿಧನ
ಉಡುಪಿ: ಗುಂಡಿಬೈಲು ನಿವಾಸಿ ಸುಧಾಕರ ಶ್ರೀಯಾನ್ (67) ಇವರು ಜೂನ್ 10ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
20 ವರ್ಷಗಳ ಕಾಲ ರಿಕ್ಷಾ ಚಾಲಕ ಹಾಗೂ ಮಾಲಕರಾಗಿದ್ದ ಇವರು ಉಡುಪಿ ರಥಬೀದಿ ಅಟೋ ಚಾಲಕ-ಮಾಲಕ ಶ್ರೀ ಗಣೇಶೋತ್ಸವ ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು. ಇವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.





