ಜೂ14: ಉಪ್ಪೂರಿನಲ್ಲಿ ‘ಉಡುಪು ಹಸ್ತಾಂತರ ಕಾರ್ಯಕ್ರಮ’
ಉಡುಪಿ: ರಾಮಕ್ಷತ್ರಿಯ ಯುವ ಸಂಘ ಉಡುಪಿ, ನೇತ್ರ ಜ್ಯೋತಿ ಕಾಲೇಜು ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವರ ಜಂಟಿ ಆಶಯದಲ್ಲಿ “ಉಡುಪು ಹಸ್ತಾಂತರ ಕಾರ್ಯಕ್ರಮ” ಜೂ.14ರಂದು ಸ್ಪಂದನ ವಿಶೇಷ ಮಕ್ಕಳ ಕೇಂದ್ರ, ಕೆ.ಜಿ. ರೋಡ್ ಉಪ್ಪೂರು ಉಡುಪಿ ಇಲ್ಲಿ ನಡೆಯಲಿದೆ.
ಈ ಹಸ್ತಾಂತರ ಕಾರ್ಯಕ್ರಮದ ಉದ್ಘಾಟನೆಯನ್ನು ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು, ನಿರ್ದೇಶಕರು ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳು ಇವರು ನಡೆಸಲಿದ್ದಾರೆ. ಈ ಶಿಬಿರದಲ್ಲಿ ಅಗತ್ಯವುಳ್ಳ ಸ್ಲಂ ನಿವಾಸಿಗಳು,ಅನಾಥಾಶ್ರಮ ಹಾಗೂ ಇತರ ಸಂಸ್ಥೆಗಳಿಗೆ ಉಡುಪು ನೀಡಲಾಗುವುದು. ಕಾರ್ಯಕ್ರಮಕ್ಕೆ ರಾಮ ಕ್ಷತ್ರೀಯ ಉಡುಪಿ ನಗರ ಘಟಕ, ಸಾಸ್ತಾನ, ನೀಲಾವರ, ಕಾಪು, ಸಾಂತ್ಯಾರು, ರಾಮ ಕ್ಷತ್ರೀಯ ಸಂಘ ಉಡುಪಿ, ರಾಮ ಕ್ಷತ್ರೀಯ ಮಹಿಳಾ ಮಂಡಳಿ ಉಡುಪಿ ರಾಮಕ್ಷತ್ರಿಯ ವೆಲ್ಫೇರ್ ಟ್ರಸ್ಟ್ ಉಡುಪಿ ಸಹಕಾರ ನೀಡಲಿದ್ದಾರೆ.





