ಮಣಿಪಾಲ: ಹೊಟೇಲ್ ಮಾಲಕರ ವಿರುದ್ಧ ಪ್ರಕರಣ ದಾಖಲು

ಮಣಿಪಾಲ, ಜೂ.4: ಅವಧಿ ಮೀರಿ ಹೊಟೇಲ್‌ನಲ್ಲಿ ವ್ಯವಹಾರ ಮಾಡುತ್ತಿದ್ದ ಮಾಲಕನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿ ಕಚೇರಿ ರಸ್ತೆಯಲ್ಲಿರುವ ಸ್ಪೈಸ್ ಆ್ಯಂಡ್ ಐಸ್ ಹೋಟೆಲ್‌ನವರು ಅವಧಿ ಮೀರಿ ಗಿರಾಕಿಗಳಿಗೆ ಸರ್ವಿಸ್ ಮತ್ತು ಪಾರ್ಸೆಲ್ ನೀಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತೆರಳಿ, ಹೋಟೇಲು ಮುಚ್ಚಿಸಿದ್ದಾರೆ. ಹೋಟೇಲ್‌ನ ವ್ಯವಸ್ಥಾಪಕರಿಗೆ ಈಗಾಗಲೇ ಹಲವಾರು ಬಾರಿ ಮೌಖಿಕವಾಗಿ ಹೊಟೇಲನ್ನು ಸರಿಯಾದ ಸಮಯಕ್ಕೆ ಬಂದ್ ಮಾಡಲು ತಿಳಿಸಿದ್ದರೂ ಹೋಟೇಲ್ ವ್ಯವಸ್ಥಾಪಕರು ಯಾವುದೇ ಪರವಾನಿಗೆ ಪಡೆಯದೇ ಅವಧಿ ಮೀರಿ ಹೋಟೇಲಿನಲ್ಲಿ ವ್ಯವಹಾರ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!