ಮೂಡನಿಡಂಬೂರು ಗರೋಡಿ: ಮನವಿ ಪತ್ರ ಬಿಡುಗಡೆ- ಸಂಕಲ್ಪ ಕಾಣಿಕೆ ಹುಂಡಿ ಹಸ್ತಾಂತರ

ಉಡುಪಿ, ಜೂ.31: ಮೂಡನಿಡಂಬೂರು ಶ್ರೀಬ್ರಹ್ಮಬೈದರ್ಕಳ ಗರೋಡಿಯ ಜೀರ್ಣೋದ್ದಾರ ಕಾರ್ಯ ಪ್ರಗತಿಯಲ್ಲಿದ್ದು ಮನವಿ ಪತ್ರವನ್ನು ಭಾನುವಾರ ಗರೋಡಿಯ ಆವರಣದಲ್ಲಿ ಬಿಡುಗಡೆಗೊಳಿಸಿ, ಸಂಕಲ್ಪಕಾಣಿಕೆ ಹುಂಡಿ ಭಕ್ತರಿಗೆ ಹಸ್ತಾಂತರಿಸಲಾಯಿತು.

ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಟಿ.ಜೆ.ಹೆಗ್ಡೆ, ಪ್ರಧಾನ ಕಾರ್ಯದರ್ಶಿಡಾ|ಸಂದೀಪ್ ಸನಿಲ್, ಕೋಶಾಧಿಕಾರಿ ಹರೀಶ್ ಪೂಜಾರಿ, ಆಡಳಿತ ಮೊಕ್ತಸರ ಪ್ರಭಾತ್ ಶೆಟ್ಟಿ ಆಡಳಿತ ಸಮಿತಿ ಅಧ್ಯಕ್ಷ ಗುರುರಾಜ ಎಂ. ಶೆಟ್ಟಿ, ಕಾಂಗ್ರೆಸ್ ಮುಖಂಡ ಪ್ರಸಾದ್‌ ರಾಜ್ ಕಾಂಚನ್, ಗ್ಯಾರಂಟಿ ಯೋಜನೆ ಉಡುಪಿ ತಾಲೂಕು ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್.

ಗಣ್ಯರಾದ ಪುರುಷೋತ್ತಮ ಶೆಟ್ಟಿ, ತೋಟದ ಮನೆ ದಿವಾಕರ ಶೆಟ್ಟಿ, ಸುಪ್ರಸಾದ ಶೆಟ್ಟಿ, ಪ್ರಭಾಕರ ಪೂಜಾರಿ, ಉದಯ ಕುಮಾರ್ ಶೆಟ್ಟಿ, ದೇವಾನಂದ ಸಿ.ಎ., ಸುರೇಶ ಶೆಟ್ಟಿ, ದಿವಾಕರ ಸನಿಲ್, ವಿಟ್ಟಲ ಶೆಟ್ಟಿ ,ಶಶಿಕಾಂತ್ ತಂತ್ರಿ, ಹರೀಶ್ ರಾಮ್, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ಸಂತೋಷ ಜತ್ತನ್, ನಾರಾಯಣ ಜತ್ತನ್‌, ಜಗನ್ನಾಥ ಕೋಟ್ಯಾನ್, ಗಣೇಶ ಅಮೀನ್, ದಿನೇಶ್ ಅಮೀನ್, ಸದಾನಂದ ಪೂಜಾರಿ, ಮಧು ಭಟ್, ಪ್ರಭಾಕರ ಶೆಟ್ಟಿ ಸತೀಶ್ ಪೂಜಾರಿ, ಸತೀಶ್ ಅಮೀನ್, ಪ್ರವೀಣ್ ಶೆಟ್ಟಿ, ನಾಗಬ್ರಹ್ಮಸ್ಥಾನದ ಪ್ರಶಾಂತ್, ಮದಿಪು ಮಹಾಬಲ ಶೆಟ್ಟಿ, ಯೋಗೀಶ್ ಸುವರ್ಣ, ಜಿತೇಶ್ ಪೂಜಾರಿ, ಭುಜಂಗ ಶೆಟ್ಟಿ, ಶೇಖರ ಜತ್ತನ್, ಶಶಿಧರ ಅಮೀನ್, ನಿತಿನ್ ಪೂಜಾರಿ, ಮಾಧವ ಪೂಜಾರಿ ಹಾಗೂ ಆಡಳಿತ ಸಮಿತಿಯ, ಜೀರ್ಣೋದ್ದಾರ ಸಮಿತಿಯ ಸದಸ್ಯರು, ಲೆಪ್ಪಿನವರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

ಶಿಕ್ಷಕ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!