ಉಡುಪಿ: ಆಲ್ವಿನ್ ಡಿಪಾರ್ಟ್‌ಮೆಂಟ್ ಸ್ಟೋರ್ ಮಾಲಕ ಆಲ್ವಿನ್ ಲಿಯೋ ಸಲ್ಡಾನ್ಹಾ ನಿಧನ

ಉಡುಪಿ: ನಗರದ ಕೋರ್ಟ್ ರೋಡ್‌ನಲ್ಲಿ ಈ ಹಿಂದೆ ಕಾರ್ಯಚರಿಸುತ್ತಿದ್ದ ಹೆಸರಾಂತ ಆಲ್ವಿನ್ ಡಿಪಾರ್ಟ್‌ಮೆಂಟ್ ಸ್ಟೋರ್ ಮಾಲಕ, ಕೊರಂಗ್ರಪಾಡಿ ನಿವಾಸಿ ಆಲ್ವಿನ್ ಲಿಯೋ ಸಲ್ಡಾನ್ಹಾ(62) ಇಂದು ಹೃದಯಾಘಾತದಿಂದ ನಿಧನರಾದರು.

ಕೆಮ್ತೂರಿನಲ್ಲಿ ಬೇಕರಿ ತಿನಿಸುಗಳನ್ನು ತಯಾರಿಸುವ ಬೃಹತ್ ಫ್ಯಾಕ್ಟರಿ ಮುನ್ನಡೆಸಿ ಉಡುಪಿ ಜಿಲ್ಲೆಯಾದ್ಯಂತ ಬೇಕರಿ ತಿನಿಸು, ಕೇಕ್, ಕುಸ್ವರ್ ಸಹಿತ ವಿವಿಧ ಬಗೆಯ ತಿಂಡಿಗಳನ್ನು ವಿತರಿಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ 11 ಗಂಟೆಗೆ ಉದ್ಯಾವರ ಸೈಂಟ್ ಝೇವಿಯರ್ ಚರ್ಚ್‌ನಲ್ಲಿ ನಡೆಯಲಿದೆಂದು ಕುಟುಂಬ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!