12 ವರ್ಷಗಳ ಹಿಂದಿನದ್ದು ಮರೆತುಬಿಡಿ, ಭವಿಷ್ಯದ ಬಗ್ಗೆ ಗಮನಕೊಡಿ- ಪ್ರಧಾನಿ ಮೋದಿ ಸಲಹೆ

Oplus_131072

ನವದೆಹಲಿ: ಐದು ದೇಶಗಳ ವಿದೇಶಿ ಪ್ರವಾಸ ವಾಪಸ್ ಆಗಿದ್ದ ಪ್ರಧಾನಿ ನರೇಂದ್ರ ಮೋದಿ ಗುರುವಾರ ನಾಲ್ಕುವರೆ ತಾಸು ಸಚಿವ ಸಂಪುಟದ ಸಭೆ ನಡೆಸಿದ್ದು, 12 ವರ್ಷ ಸರ್ಕಾರ ಪೂರೈಸುವ ಮುನ್ನ ಹಿಂದಿನದ್ದು ಮರೆತುಬಿಡಿ, ಭವಿಷ್ಯದ ಬಗ್ಗೆ ಗಮನಕೊಡಿ ಎಂದು ತಮ್ಮ ಸಂಪುಟದ ಸದಸ್ಯರಿಗೆ ಬಲವಾದ ಸಂದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

ಪ್ರಧಾನಿ ಮೋದಿ ಅವರ ಸರ್ಕಾರವು ತನ್ನ ಮೂರನೇ ಅವಧಿಯ 12 ವರ್ಷಗಳು ಮತ್ತು ಎರಡು ವರ್ಷಗಳನ್ನು ಪೂರ್ಣಗೊಳಿಸುವ ಜೂನ್ 9 ಕ್ಕಿಂತ ಮೊದಲು ಸಂಪುಟ ಪುನರ್ರಚನೆಯಾಗುವ ಸಾಧ್ಯತೆಯ ಮಧ್ಯೆ ಈ ಸಭೆ ನಡೆದಿದೆ. 

ಕ್ಲೋಸ್ ಡೋರ್ ಸಭೆಯಲ್ಲಿ ಪ್ರಧಾನಿ ಮೋದಿ, ಹಿಂದೆ ನಡೆದದ್ದನ್ನು ಮರೆತುಬಿಡಿ, ಭವಿಷ್ಯದತ್ತ ಗಮನಹರಿಸಿ ಎಂದು ಹೇಳಿದ್ದು, ಜೊತೆಗೆ 2047ರ ವೇಳೆಗೆ ದೇಶವು ಅಭಿವೃದ್ಧಿ ಹೊಂದಲು ಅನುಸರಿಸಬೇಕಾದ ಸುಧಾರಣಾ ಉಪಕ್ರಮಗಳ ಕುರಿತು ವಿಶಾಲ ರೂಪರೇಷೆ ನೀಡಿದ್ದಾರೆ ಎನ್ನಲಾಗಿದೆ. 

ಮೂಲಗಳ ಪ್ರಕಾರ, ಪ್ರತಿಯೊಂದು ಸಚಿವಾಲಯವು ವಿಕ್ಷಿತ್ ಭಾರತ್ 2047 ಅನ್ನು ಮಾರ್ಗದರ್ಶಿ ದೃಷ್ಟಿಕೋನವಾಗಿಟ್ಟು ಕೊಂಡು ಕೆಲಸ ಮಾಡಬೇಕು. ಸುಧಾರಣೆಗಳು ಕಡತಗಳಿಗೆ ಸೀಮಿತವಾಗಿರಬಾರದು, ಬದಲಿಗೆ ನಾಗರಿಕರಿಗೆ ವೇಗವಾದ ಮತ್ತು ಸರಳವಾದ ಆಡಳಿತವಾಗಿ ಪರಿವರ್ತಿಸಬೇಕು ಎಂದು ಒತ್ತಿ ಹೇಳಿದ್ದಾರೆ. 

ಅನಗತ್ಯ ಅಧಿಕಾರಶಾಹಿ ವಿಳಂಬಗಳಿಲ್ಲದೆ ಕಡತಗಳು ತ್ವರಿತವಾಗಿ ಕಾರ್ಯಗತಗೊಳ್ಳಬೇಕು. ಸಚಿವರು ಲಭ್ಯವಿರುವ ಸಮಯದೊಳಗೆ ಉತ್ಪಾದಕತೆಯನ್ನು ಹೆಚ್ಚಿಸಬೇಕು. ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಸರಳತೆಯನ್ನು ತರುವ ಮತ್ತು ಸಚಿವಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಮುಖ ಆದ್ಯತೆಯಾಗಿ ಉಳಿಯುವಂತೆ ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ.

ಸರ್ಕಾರದ 12 ವರ್ಷಗಳ ಪ್ರಯಾಣ, ಕಲ್ಯಾಣ ಉಪಕ್ರಮಗಳು ಮತ್ತು ಸುಧಾರಣಾ ಕಾರ್ಯಸೂಚಿಯನ್ನು ನೇರವಾಗಿ ಜನರಿಗೆ ತಲುಪಿಸುವಂತೆ ಸಚಿವರಿಗೆ ಹೇಳಿದ್ದಾರೆ. ಇದೇ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸರ್ಕಾರದ ಇತ್ತೀಚಿನ ಐದು ರಾಷ್ಟ್ರಗಳ ರಾಜತಾಂತ್ರಿಕ ಸಂಪರ್ಕದ ಬಗ್ಗೆ ಸಚಿವ ಮಂಡಳಿಗೆ ವಿವರಿಸಿದ್ದು, ಇದು ಯಶಸ್ವಿಯಾಗಿದೆ ಎಂದು ಬಣ್ಣಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!