ಮಲ್ಪೆ: “ಆನಂದ ಶರಧಿ” ಭಜನಾ ಸ್ಪರ್ಧೆ ಉದ್ಘಾಟನೆ
ಉಡುಪಿ: ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಮಲ್ಪೆ ಕಡಲಕಿನಾರೆಯ ಆನಂದ ಶರಧಿಯಲ್ಲಿ ಭಜನಾ ಸ್ಪರ್ಧೆಯನ್ನು ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಸಿ ಅನುಗ್ರಹ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಯಶಪಾಲ್ ಸುವರ್ಣ, ಕಟೀಲು ದೇವಸ್ಥಾನದ ಅರ್ಚಕರದ ಹರಿನಾರಾಯಣದಾಸ ಅಸ್ರಣ್ಣ,, ಮಾಜಿ ಶಾಸಕ ಕೆ.ರಘುಪತಿ ಭಟ್, ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ.ಜಿ.ಎಸ್ ಚಂದ್ರಶೇಖರ್,ಉಜ್ವಲ್ ಡೆವಲಪರ್ಸ್ ಮಾಲಕ ಪುರುಷೋತ್ತಮ ಶೆಟ್ಟಿ, ಉದ್ಯಮಿ ಸಾಧು ಸಾಲಿಯಾನ್, ಕೊರಗ ಸಮಾಜದ ಅಧ್ಯಕ್ಷ ಗಣೇಶ್ ಬಾರ್ಕೂರು, ಆರ್‌ಎಸ್‌ಎಸ್ ಮಂಗಳೂರು ವಿಭಾಗದ ಕಾರ್ಯವಾಹ ಡಾ. ವಾದಿರಾಜ್, ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್, ಕಲಾಶ್ರೀ ಮಹೋಪಾಧ್ಯಾಯ ಮಧೂರು ಪಿ.ಬಾಲಸುಬ್ರಹ್ಮಣ್ಯ, ಉದ್ಯಮಿ ದಿನೇಶ್ ಪುತ್ರನ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಆರಂಭದಲ್ಲಿ ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನದಿಂದ ಆನಂದ ಶರಧಿಯ ತನಕ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಗಣ್ಯರು, ಸಮಿತಿಯ ಸಂಚಾಲಕರು, ಸದಸ್ಯರು,ಹಲವಾರು ಭಜನಾ ತಂಡಗಳ ಸದಸ್ಯರು,ಕುಣಿತ ಭಜನೆಗಳೊಂದಿಗೆ ಶೋಭಾ ಯಾತ್ರೆ ನಡೆಯಿತು.





