ಶ್ರೀನಾರಾಯಣ ಗುರು ಯುವ ವೇದಿಕೆ: ಶ್ರೀನಾರಾಯಣ ಗುರು ಉದ್ಯಾನವನದಲ್ಲಿ ಮೇ14-16 ವರೆಗೆ ಧಾರ್ಮಿಕ ಕಾರ್ಯಕ್ರಮ
ಉಡುಪಿ: ಯುವವಾಹಿನಿ ಉಡುಪಿ ಘಟಕ, ಶ್ರೀರಾಮಕೃಷ್ಣ ಭಜನಾ ಮಂಡಳಿ, ಬಿಲ್ಲವ ಸೇವಾ ಸಂಘ ಕುತ್ಪಾಡಿ, ಬೊಳ್ಜೆ ಶ್ರೀ ಬ್ರಹ್ಮ ಬೈದರ್ಕಳ ಯಕ್ಷಗಾನ ಮಂಡಳಿ ಉದ್ಯಾವರ ಇವರಿಂದ ಶ್ರೀ ನಾರಾಯಣ ಗುರು ಉದ್ಯಾನವನ, ಬಲಾಯಿಪಾದೆಯಲ್ಲಿ ಮೇ 14 ರಿಂದ 16 ವರೆಗೆ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಮೇ 14ರ ಗುರುವಾರ ಸಂಜೆ 6:30ಕ್ಕೆ ಯುವವಾಹಿನಿ ಉಡುಪಿ ಇವರಿಂದ ಸದ್ಭಕ್ತಿ, ಸಂದೇಶ, ಸಮೃದ್ಧಿ – ಗುರು ಸತ್ಸಂಗ.

ಮೇ 15 ಶುಕ್ರವಾರ ಸಂಜೆ 6:30 ಕ್ಕೆ ಶ್ರೀರಾಮಕೃಷ್ಣ ಭಜನಾ ಮಂಡಳಿ, ಬಿಲ್ಲವ ಸೇವಾ ಸಂಘ ಕುತ್ಪಾಡಿ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ.

ಮೇ 16ರ ಶನಿವಾರ ಸಂಜೆ 6ಕ್ಕೆ ಶ್ರೀ ಬ್ರಹ್ಮ ಬೈದರ್ಕಳ ಯಕ್ಷಗಾನ ಕಲಾ ಮಂಡಳಿ ಬೊಳ್ಜೆ,ಉದ್ಯಾವರ ಇದರ ಸದಸ್ಯರಿಂದ ಮತ್ತು ಅಥಿತಿ ಕಲಾವಿದರಿಂದ “ಶ್ರೀ ಶನೀಶ್ವರ ಮಹಾತ್ಮೆ “ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳಿಗೆ ಶ್ರೀನಾರಾಯಣ ಗುರು ಯುವ ವೇದಿಕೆ (ರಿ)ಉಡುಪಿ ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಆಹ್ವಾನಿದ್ದಾರೆ.





