ಧರ್ಮ ಕೇಂದ್ರಿತ ಜೀವನ ನಡೆಸಿದಲ್ಲಿ ದೇವರ ಅನುಗ್ರಹ ಪ್ರಾಪ್ತವಾಗುತ್ತದೆ: ಪುತ್ತಿಗೆಶ್ರೀ

ಉಡುಪಿ: ಮನುಷ್ಯರಾದ ನಾವೆಲ್ಲ ಸುಖ: ಶಾಂತಿ,ನೆಮ್ಮದಿಯಿಂದಿರಲು ಧರ್ಮ ಕೇಂದ್ರಿತ ಜೀವನವನ್ನು ನಡೆಸಿದಲ್ಲಿ ದೇವರ ಅನುಗ್ರಹಕ್ಕೆ ಪಾತ್ರರಾಗಿ ಜೀವನದ ಸಾರ್ಥಕ್ಯವನ್ನು ಪಡೆದುಕೊಳ್ಳಬಹುದು.ಹಾಗೆಯೇ ಗ್ರಾಮ ದೇವಾಲಯಗಳು ಧಾರ್ಮಿಕ  ಆಚರಣೆಗಳಿಗೆ ದಾರಿದೀವಿಗೆಯಾಗಿರಬೇಕು ಎಂದು ಉಡುಪಿ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು. 

ಶ್ರೀಗಳು ಭಾನುವಾರದಂದು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆದ ಕಾರ್ತಿಕ ಮಾಸದ ಲಕ್ಷದೀಪೋತ್ಸವ, ಹಾಗೂ ಲಕ್ಷ ತುಳಸಿ ಬಿಲ್ವಾರ್ಚನೆಯ ತತ್ಸಂಬಂಧ  ಹಮ್ಮಿಕೊಂಡ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ  ನಡೆಯಲಿರುವ ರಾಶಿಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಶ್ರೀ ದೇವಳದ 2021ನೇ ಸಾಲಿನ ದೇವಳದ ದಿನದರ್ಶಿಕೆ ಬಿಡುಗಡೆಗೊಳಿಸಿ,ದೇವಳದ ವತಿಯಿಂದ ನಡೆಯುತ್ತಿರುವ  ಧಾರ್ಮಿಕ ಕಾರ್ಯಗಳು ಹಾಗೂ ಸಮಾಜಮುಖಿ ಸೇವಾ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. 

ಇತ್ತೀಚೆಗೆ ಆಗಲಿದ ನಾಡಿನ ಶ್ರೇಷ್ಠ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ  ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ  ಸಲ್ಲಿಸಲಾಯಿತು. ದಿನದರ್ಶಿಕೆ ವಿನ್ಯಾಸ ಗೊಳಿಸಿದ ಪೂರ್ಣಿಮಾ ಜನಾರ್ದನ್ ರವರನ್ನು ಗೌರವಿಸಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂಬರುವ ರಾಶಿಪೂಜೆ ಮಹೋತ್ಸವಕ್ಕೆ ಸರ್ವ ಭಗವದ್ಭಕ್ತರ ಸಹಕಾರ ಕೋರಿದರು.


ಈ ಸಂದರ್ಭದಲ್ಲಿ ವೇದಮೂರ್ತಿ ಹಯವದನ ತಂತ್ರಿ, ನಗರಸಭಾ ಸದಸ್ಯ ವಿಜಯ ಕೊಡವೂರು, ಕೆನರಾ ಬ್ಯಾಂಕಿನ ಸಹಾಯಕ ಪ್ರಬಂಧಕ ಎಂ.ವೈ.ಹರೀಶ್, ರಾಶಿಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಸೇವಾ ಸಮಿತಿ ಅಧ್ಯಕ್ಷ ಆನಂದ ಪಿ ಸುವರ್ಣ, ಭಕ್ತವ್ರಂದದ ಅಧ್ಯಕ್ಷ ರವಿರಾಜ ಹೆಗ್ಡೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಡಿಗ ಕ್ರಷ್ಣ ಮೂರ್ತಿ ಭಟ್, ಭಾಸ್ಕರ ಪಾಲನ್, ರಾಜ ಎ.ಸೇರಿಗಾರ್, ಚಂದ್ರಕಾಂತ ಪುತ್ರನ್, ಬಾಬ.ಕೆ, ಸುಧಾ.ಎನ್ ಶೆಟ್ಟಿ, ಬೇಬಿ ಎಸ್ ಮೆಂಡನ್ ಉಪಸ್ಥಿತರಿದ್ದರು. 

ರಾಶಿಪೂಜಾ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿದರು. ಕೊಡವೂರು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ನಿರೂಪಿಸಿದರು. ಪೂರ್ಣಿಮಾ ಜನಾರ್ದನ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!