ಕಾಪು: ಕಲ್ಯ ಪರಿಸರದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ!

ಕಾಪು: ಕಾಪು ಪುರಸಭೆ ವ್ಯಾಪ್ತಿಯ ಕಲ್ಯ ಭಾರತ್ ನಗರ ಎಂಬಲ್ಲಿ ಚಿರತೆ ಓಡಾಟ ನಡೆಸುತ್ತಿದ್ದು, ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಬೇಟೆಗಾಗಿ ಅರಸುತ್ತ ನಗರದತ್ತ ಬಂದಿರುವ ಚಿರತೆ ಈಗಾಗಲೆ ಬೀದಿ ನಾಯಿಯೊಂದನ್ನು ಬಲಿ ಪಡೆದುಕೊಂಡಿದೆ ಎನ್ನಲಾಗಿದೆ.

ಇದಕ್ಕೆ  ಸಾಕ್ಷಿ ಎಂಬಂತೆ ಈ ಪರಿಸರದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಮತ್ತು ಮನೆಯೊಂದರ ಅಂಗಳದಲ್ಲಿ ಹಾಗೂ ರಸ್ತೆಗಳಲ್ಲಿ ನಾಯಿಯ ರಕ್ತದ ಕಲೆಗಳು ಕಂಡುಬಂದಿವೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ಅವರು,  ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು, ನಿನ್ನೆ  ಮಧ್ಯರಾತ್ರಿ ಸ್ಥಳಕ್ಕೆ ಆಗಮಿಸಿದ ಕಾಪು ಉಪವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟ, ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ಸ್ಥಳೀಯರೊಂದಿಗೆ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಸ್ಥಳದಲ್ಲಿ ಪತ್ತೆಯಾದ ಹೆಜ್ಜೆ ಗುರುತು  ಚಿರತೆಯದ್ದೇ ಎಂಬುದು ದೃಢಪಟ್ಟಿದೆ. ಈ ಚಿರತೆಯು ಬೀದಿ ನಾಯಿಯೊಂದನ್ನು ಹಿಡಿದು ಸುರಕ್ಷಿತ ಜಾಗಕ್ಕೆ ಕೊಂಡೊಯ್ದು ತಿಂದಿರುವ ಸಾಧ್ಯತೆ ಇದ್ದು, ಇದರಿಂದ ದಾರಿಯುದ್ದಕ್ಕೂ ರಕ್ತದ ಕಲೆಗಳು ಕಂಡುಬಂದಿದೆ.

ಅಲ್ಲದೆ ಅದು ಸಮೀಪದ ಪೊದೆಯಲ್ಲಿ ವಾಸ ಮಾಡಿಕೊಂಡಿರುವ ಸಾಧ್ಯತೆಯೂ ಇದ್ದು,ಇಂದು ಸಂಜೆಯ ವೇಳೆ ಮತ್ತೆ ಅದು ಆಹಾರ ಅರಸಿ ಹೊರಡುವ ಸಾಧ್ಯತೆ ಅಧಿಕ. ಆದರೆ ಸಾರ್ವಜನಿಕರು ಯಾರು ಭಯಪಡಬೇಕಾದ ಅಗತ್ಯ ಇಲ್ಲ. ಚಿರತೆಯ ಸೆರೆಗಾಗಿ ಆ ಪರಿಸರದಲ್ಲಿ ಬೋನನ್ನು ಇರಿಸಲಾಗಿದೆ’ ಎಂದು ಕಾಪು ಉಪವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!