ಮಕ್ಕಳ ಕ್ರಿಯಾಶೀಲತೆಗೆ ರಂಗಶಿಬಿರಗಳು ಆಗತ್ಯ: ಪ್ರದೀಪ್ಚಂದ್ರ ಕುತ್ಪಾಡಿ
ಉಡುಪಿ: ರಂಗ ಶಿಬಿರಗಳು ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಪ್ರಸುತ್ತ ದಿನ ಶಿಕ್ಷಣದ ಜೊತೆ ಶಿಕ್ಷಣೇತರ ಚಟುವಟಿಕೆಗಳು ಅತೀ ಮುಖ್ಯ ಎಂದು ರಂಗಕರ್ಮಿ ಪ್ರದೀಪ್ಚಂದ್ರ ಕುತ್ಪಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸೋಮವಾರ ಕೊಡವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸುಮನಸಾ ಕೊಡವೂರು ಹಮ್ಮಿಕೊಂಡ ರಂಗಶಿಬಿರ ಅಟ್ಟಾಮುಟ್ಟ ಉದ್ಘಾಟಿಸಿ ಮಾತನಾಡಿದರು. ಶಿಬಿರವು ಮಕ್ಕಳ ಶೈಕ್ಷಣಿಕ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗುತ್ತದೆಂದರು.

ಈ ಸಂದರ್ಭದಲ್ಲಿ ಸುಮನಸಾ ತಂಡದ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಗೌರವಾಧ್ಯಕ್ಷ ಎಂ.ಎಸ್. ಭಟ್, ಸಂಚಾಲಕ ಭಾಸ್ಕರ್ ಪಾಲನ್, ಶಿಬಿರದ ನಿರ್ದೇಶಕ ಚರಿತ್ ಸುವರ್ಣ ಮಂಗಳೂರು, ಎಸ್ ಡಿಎಂಸಿ ಅಧ್ಯಕ್ಷ ರಾಧಾಕೃಷ್ಣ ಪೈ, ಕೊಡವೂರು ಶಾಲೆಯ ಮುಖ್ಯ ಶಿಕ್ಷಕಿ ಶೋಭಾ, ಸಹ ಶಿಕ್ಷಕಿ ನಿಶ್ಮಿತಾ, ಶಿಬಿರದ ಸಂಚಾಲಕಿ ರಾಧಿಕಾ ದಿವಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿವಾಕರ್ ಕಟೀಲ್ ವಂದಿಸಿದರು, ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರವು 12 ದಿನಗಳ ಕಾಲ ನಡೆಯಲಿದ್ದು, 40 ವಿದ್ಯಾರ್ಥಿಗಳು ಭಾಗವಹಿಸಿದರು.





