ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ
ಬೆಂಗಳೂರು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು,ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ದ್ವಿತೀಯ ಸ್ಥಾನವನ್ನು ಉಡುಪಿ ಜಿಲ್ಲೆ ಪಡೆದುಕೊಂಡಿದೆ. ಶೇ.91.1 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಶಂಕರನಾರಾಯಣ ಮದರ್ ತೇರೆಸಾ ಆಂಗ್ಲ ಮಾಧ್ಯಮ ಶಾಲೆಯ ಪ್ರೀತಮ್ ಜಿ.ಪೂಜಾರಿ 625ಕ್ಕೆ 625 ಅಂಕ ಪಡೆದಿದ್ದಾರೆ. ರಾಜ್ಯದಲ್ಲಿ ಒಟ್ಟು 7 ವಿದ್ಯಾರ್ಥಿಗಳು 625 ಅಂಕಪಡೆದಿದ್ದಾರೆ.
ಅದೇ ರೀತಿ ಕಾರ್ಕಳ ಜ್ಞಾನಸುಧಾ ಶಾಲೆಯ ಮಹಾಲಕ್ಷ್ಮಿ ಪೈ ಬಿ. 624 ಅಂಕ ಪಡೆದಿದ್ದಾರೆ.
ಜಿಲ್ಲಾವಾರು ಫಲಿತಾಂಶದ ವಿವರ
ದಕ್ಷಿಣ ಕನ್ನಡ ಜಿಲ್ಲೆ- 98.40%
ಉಡುಪಿ – 98.18%
ಉತ್ತರ ಕನ್ನಡ- 98.09%
ಹಾಸನ- 97.51%
ಮಂಡ್ಯ- 97.45%
ಶಿರಸಿ- 97.21%
ಹಾವೇರಿ- 96.87%
ಕೊಡಗು- 96.70%
ಶಿವಮೊಗ್ಗ- 96.56%
ವಿಜಯನಗರ- 96.39%
ಬೆಂಗಳೂರು ಗ್ರಾಮಾಂತರ – 95.84%
ಧಾರವಾಡ – 95.59%
ಕೋಲಾರ- 95.50%
ಬಾಗಲಕೋಟೆ- 95.42%
ಬೆಂಗಳೂರು ಉತ್ತರ- 95.34%
ಗದಗ- 95.24%
ಚಿಕ್ಕಮಗಳೂರು- 94.99%
ಬೆಳಗಾವಿ – 94.75%
ದಾವಣಗೆರೆ- 94.64%
ಮೈಸೂರು- 94.50%
ರಾಯಚೂರು- 94.41%
ಚಿಕ್ಕೋಡಿ- 94.09%
ಬಳ್ಳಾರಿ- 93.36%
ಕೊಪ್ಪಳ- 93.10%
ರಾಮನಗರ- 92.83%
ಚಿತ್ರದುರ್ಗ- 92.25%
ಬೀದರ್- 92.18%
ತುಮಕೂರು- 92.04%
ಚಾಮರಾಜನಗರ- 91.89%
ಯಾದಗಿರಿ- 91.89%
ಬೆಂಗಳೂರು ದಕ್ಷಿಣ- 91.65%
ಚಿಕ್ಕಬಳ್ಳಾಪುರ- 90.88%
ಮಧುಗಿರಿ- 90.26%
ಕಲಬುರಗಿ-85.06%”

ಎಸ್.ಎಸ್.ಎಲ್.ಸಿ.ತೃತೀಯ ಭಾಷೆಗೆ ಹೈಕೋರ್ಟ್ ಆದೇಶ ದಂತೆ ಗ್ರೇಡ್ ಬದಲಿಗೆ ಅಂಕಗಳನ್ನೇ ಪರಿಗಣಿಸಿ ಫಲಿತಾಂಶ ಪ್ರಕಟಿಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಲಯ ಆದೇಶ ಮತ್ತು ಇಲಾಖೆಯ ನಿರ್ಧಾರದ ಕುರಿತು ಬುಧವಾರ ಸಂಜೆ ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಗೂ ಇ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ನ್ಯಾಯಾಲಯ ತೀರ್ಮಾನ ಪಾಲನೆಗೆ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಗ್ರೇಡ್ ನೀಡುವುದಾಗಿ ಹೇಳಿದ್ದರಿಂದ ಹೆಚ್ಚಿನ ಮಕ್ಕಳು ಪರೀಕ್ಷೆ ಬರೆಯುವ ವೇಳೆ ತೃತೀಯ ಭಾಷೆಗೆ ಹೆಚ್ಚು ಗಮನ ನೀಡಿರಲಿಲ್ಲ. ಅಂಕಗಳಿಗೆ ಆದ್ಯತೆ ಇಲ್ಲದ ಕಾರಣ ಹಲವು ವಿದ್ಯಾರ್ಥಿಗಳು ನೆಪ ಮಾತ್ರಕ್ಕೆ ಪರೀಕ್ಷೆ ಬರೆದಿದ್ದರು. ಈಗ ಅಂತಹವರಿಗೆ ಕಟ್ಟನಿಟ್ಟಾಗಿ ಮೌಲ್ಯಮಾಪನ ಮಾಡಿ ಅಂಕ ನೀಡಿದರೆ ಅವರ ಭವಿಷ್ಯಕ್ಕೆ ಕುತ್ತು ಉಂಟಾಗಬಹುದು. ಹೀಗಾಗಿ ಕೃಪಾಂಕ ನೀಡಿರುವ ಸಾಧ್ಯತೆಗಳಿವೆ.





