ಹೆಸರಾಂತ ಮೋಟಾರು ರಿವೈಂಡರ್ ಚಿಟ್ಪಾಡಿ ರಾಮ ಸೇರಿಗಾರ್ ನಿಧನ

ಉಡುಪಿ: ಚಿಟ್ಪಾಡಿ ನಿವಾಸಿ, ಹೆಸರಾಂತ ಮೋಟಾರು ರಿವೈಂಡಿಂಗ್ ಕೆಲಸಗಾರರಾದ ರಾಮ ಸೇರಿಗಾರ್ (79)ಕಳೆದ ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಚಿಟ್ಟಾಡಿ ವಿಜಯ ವೀರ ಸಂಘದ ಬಳಿಯ ತಮ್ಮ ಮನೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮೋಟಾರು ರಿವೈಂಡಿಗ್ ಕೆಲಸ ಮಾಡುತ್ತಿದ್ದರು. ಮಾತ್ರವಲ್ಲದೆ ಸಾಮಾಜಿಕ ಸಂಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಸ್ಥಳೀಯವಾಗಿ ಜನಾನುರಾಗಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಅವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ 11 ಗಂಟೆಗೆ ಬೀಡಿನಗುಡ್ಡೆಯ ರುಧ್ರಭೂಮಿಯಲ್ಲಿ ನಡೆಯಲಿದೆಂದು‌ ಕುಟುಂಬ ಮೂಲಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!