ಪದ್ಮಶ್ರೀ ಡಾ.ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ

ಉಡುಪಿ: ಹಿರಿಯ ಸಂಸ್ಕೃತ ವಿದ್ವಾಂಸ, ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ (84) ಇಂದು ತಮ್ಮ ಸ್ವಗೃಹ ಅಂಬಲಪಾಡಿಯಲ್ಲಿ ಬೆಳಗ್ಗೆ ನಿಧನರಾಗಿದ್ದಾರೆ.

ಹಲವು ತಿಂಗಳುಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹೆಚ್ಚು ಪ್ರವಚನಗಳಿಗೆ ಹಾಜರಾಗದೆ ಮನೆಯಲ್ಲೇ ಇದ್ದು ಭಗವದ್ಗೀತೆಯ ರಚನಾ ಕಾರ್ಯದಲ್ಲಿ ಮಗ್ನರಾಗಿದ್ದರು.

ಬನ್ನಂಜೆಯವರ ಕಿರಿಯ ಮಗ ಕೆಲವು ದಿನಗಳ ಹಿಂದೆ ಮೃತರಾಗಿದ್ದು, ಭಾನುವಾರ ಮನೆಯಲ್ಲೇ 12ನೇ ದಿನದ ವಿಧಿ ವಿಧಾನ ನಡೆಸಲು ತಯಾರಿ ನಡೆಸಲಾಗುತ್ತಿತ್ತು. ಈ ಮಧ್ಯೆ ಕುಟುಂಬಕ್ಕೆ ಮತ್ತೊಂದು ಆಘಾತ ಉಂಟಾಗಿದೆ.

ಸಾಧನೆಯ ಕ್ಷೇತ್ರ : ಪತ್ರಕರ್ತ – ಸಾಹಿತ್ಯ -ಸಂಶೋಧಕ – ಕವಿ – ಅನುವಾದಕ – ಉಪನ್ಯಾಸಕ – ಪ್ರವಚನ ವಿದ್ವಾಂಸ 
ಉದ್ಯೋಗ : ಪ್ರತಿಷ್ಠಿತ ಉದಯವಾಣಿ ದಿನಪತ್ರಿಕೆಯಲ್ಲಿ ಪತ್ರಕರ್ತ , ಸಾಪ್ತಾಹಿಕ ವಿಭಾಗ ಸಂಪಾದಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ .
ಸಾಹಿತ್ಯಿಕ ಸಾಧನೆಗಳು : ಈ ತನಕ ಸಂಸ್ಕೃತ ದಲ್ಲಿ ಸುಮಾರು ಕೃತಿಗಳು ಕನ್ನಡದಲ್ಲಿ ಸುಮಾರು 120/ಕೃತಿಗಳ ಸಂಸ್ಕೃತ ದಿಂದ ಕನ್ನಡಕ್ಕೆ  ಅನುವಾದ ಸುಮಾರು 50 ಕೃತಿ ಸೇರಿ ) ರಚನೆ ಮತ್ತು ಪ್ರಕಾಶನ ಭಾರತದ ಪ್ರಾಚೀನ ಜ್ಞಾನ ಶಾಖೆಗಳಾದ ವೇದ – ಉಪನಿಷತ್ತು – ಪುರಾಣ- ರಾಮಾಯಣ – ಮಹಾಭಾರತ ಇತ್ಯಾದಿಗಳ ಕುರಿತು ದೇಶ ವಿದೇಶಗಳಲ್ಲಿ ಈ ತನಕ ಸುಮಾರು 30000 ಸಾವಿರ ಘಂಟೆಗಳಷ್ಟು ಉಪನ್ತಾಸ ಪ್ರವಚನಗೈದ ದಾಖಲೆ .
ಸಾಧನೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು : ರಾಜ್ಯ ಮಟ್ಟದ ಪ್ರಶಸ್ತಿಗಳು : 
 ಉಡುಪಿ ಶ್ರೀ ಕೃಷ್ಣ ಮಠ ಅಷ್ಟಮಠಗಳು ಸೇರಿದಂತೆ ಅನೇಕ ಪ್ರಸಿದ್ಧ ಮಠ ಸಂಸ್ಥಾನಗಳಿಂದ ವಿದ್ಯಾ ವಾಚಸ್ಪತಿ , ವಿದ್ಯಾರತ್ನಾಕರ , ಪಂಡಿತರತ್ನ , ಸಂಶೋಧನಾ ವಿಚಕ್ಷಣ ಪಂಡಿತಾಚಾರ್ಯ ಇತ್ಯಾದಿ ಬಿರುದು ಪ್ರದಾನ 
ಉಡುಪಿ ಶ್ರೀ ಕೃಷ್ಣ ಮಠದ ಆಸ್ಥಾನ‌ ವಿದ್ವಾನ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1974 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಆಳ್ವಾಸ್ ನುಡಿಸಿರಿ ಪ್ರಶಸ್ತಿ,ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, 
 ರಾಷ್ಟ್ರೀಯ ಪ್ರಶಸ್ತಿಗಳು : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾರತ ಸರಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ 2009
ಅಂತಾರಾಷ್ಟ್ರೀಯ ಮಾನ್ಯತೆ : 2008 ರಲ್ಲಿ ಅಮೇರಿಕಾದಲ್ಲಿ ( ಪ್ರಿನ್ಸ್ಟನ್)  ನಡೆದ ವಿಶ್ವಶಾಂತಿ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ ಭಾಗಿ  
ಸಾಮಾಜಿಕ ಸೇವೆ : ನೆರೆ ಪ್ರವಾಹಗಳ ಸಂದರ್ಭಗಳಲ್ಲಿ ಸಂತ್ರಸ್ತರ ನೆರವಿಗಾಗಿ ಮಾನವೀಯತೆಯ ನೆಲೆಯಲ್ಲಿ ರಾಜ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಲಕ್ಷಕ್ಕೂ ಮಿಕ್ಕಿದ ಆರ್ಥಿಕ ದೇಣಿಗೆ 
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂತ್ರಸ್ತರಾದ ಬಡವರಿಗೆ ಆಹಾರ ಸಾಮಗ್ರಿ ‌ವಿತರಣೆ

ಬನ್ನಂಜೆ ಗೋವಿಂದಾಚಾರ್ಯರು ವೈದಿಕ ವಿದ್ಯಾರ್ಥಿವೇತನಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರು ಈ ವಿಷಯದ ಬಗ್ಗೆ ಹಲವಾರು ವ್ಯಾಖ್ಯಾನಗಳು, ಅನುವಾದಗಳು ಮತ್ತು ಮೂಲ ಕೃತಿಗಳನ್ನು ರಚಿಸಿದ್ದಾರೆ. ನಿಯತಕಾಲಿಕಗಳಲ್ಲಿ ಅವರು ನೂರಾರು ಲೇಖನಗಳನ್ನು ನೀಡಿದ್ದಾರೆ. ಅವರು ಭಾರತೀಯ ತತ್ವಶಾಸ್ತ್ರ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ ಪ್ರವಚನಗಳನ್ನು ನೀಡುವ ಮೂಲಕ ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ಪ್ರವಾಸ ಮಾಡಿದ್ದರು.

ಅನೇಕ ಕೃತಿಗಳು ಸಂಸ್ಕೃತ ಭಾಷೆಯ ಅಧ್ಯಯನಾಸಕ್ತರಿಗೆ ಆಕರ ಗ್ರಂಥಗಳಾಗಿವೆ. ಪ್ರವಚನಕಾರ ವಿದ್ವಾಂಸರಾಗಿ ಆಚಾರ್ಯರು ದೇಶ ವಿದೇಶಗಳಲ್ಲಿ ಸುಮಾರು 30,000 ಗಂಟೆಗಳಿಗೂ ಮಿಕ್ಕಿ ವಿದ್ವತ್ ಮಂಡನೆಗೈದಿದ್ದು ಲಕ್ಷಾಂತರ ಅಭಿಮಾನಿಗಳು ಶಿಷ್ಯರನ್ನು ಸಂಪಾದಿಸಿದ್ದಾರೆ.  ಸುಮಾರು ಮೂರು ದಶಕಗಳ ಅವಧಿಗೆ ಕನ್ನಡದ ಪ್ರತಿಷ್ಠಿತ ಉದಯವಾಣಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಮತ್ತು ಸಂಪಾದಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇಂದಿಗೂ ದೇಶದ ಮತ್ತು ಅಮೇರಿಕಾ ಆಸ್ಟ್ರೇಲಿಯಾ , ಯುರೋಪ್ ಇಂಡೋನೇಶ್ಯಾ, ರಷ್ಯಾ ನೆದರ್ಲ್ಯಾಂಡ್, ಸ್ವಿಟ್ಸರ್ಲ್ಯಾಂಡ್ ಗ್ರೀಸ್ ಮೊದಲಾದ ದೇಶಗಳಿಂದ ವಿದ್ವಾಂಸರು ವಿದ್ಯಾರ್ಥಿಗಳು ಸಂಶೋಧನಾಸಕ್ತರು ಆಚಾರ್ಯರಲ್ಲಿಗೆ ಬಂದು ಅಧ್ಯಯನಗೈದು ಸಂತೋಷದಿದ  ತೆರಳುತ್ತಿದ್ದಾರೆ. ಅಂಥವರಲ್ಲಿ ಅನೇಕರು ಕೊನೆಗೆ ತಮ್ಮ ಹೆಸರುಗಳನ್ನೂ ಬದಲಾಯಿಸಿಕೊಂಡು ಆಚಾರ್ಯರು ಸೂಚಿಸುವ ಭಾರತೀಯ ಹೆಸರನ್ನಿಟ್ಟುಕೊಂಡು ತೆರಳುತ್ತಿರುವುದು ಆಚಾರ್ಯರ ವಿದ್ವತ್ತಿನಲ್ಲಿ ಅವರಿಗಿರುವ ಶ್ರದ್ಧೆಯನ್ನು ತೋರಿಸುತ್ತದೆ. ಈ ಎಲ್ಲಾ ಸುಮೇರು ಸದೃಶ ವಾಙ್ಮಯ ಸಾಧನೆಗಳು ಆಚಾರ್ಯರ ಸಾಹಿತ್ಯ ನಿಷ್ಠೆ ತಪಸ್ಸು ಶ್ರದ್ಧೆಗಳಿಗೆ ಸಾಕ್ಷಿಯಾಗಿವೆ. ಅವರ ಈ ಎಲ್ಲಾ ಸಾಧನೆಗಳಿಗೆ ಕೇಂದ್ರ ಸರಕಾರದ ಪದ್ಮಶ್ರೀ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳು ಸಂದಿವೆ.

15 thoughts on “ಪದ್ಮಶ್ರೀ ಡಾ.ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ

  1. ಪರಮಾತ್ಮನಲ್ಲಿ ಲೀನ ವಾದ ಮಂದಾರ ಪುಷ್ಪ

  2. A GREAT INDIAN PHILOSOPHER OF 2 CENTURIES is no more physically, but HIS WORKS ARE FOREVER FOREVER FOREVER!!!
    I personally pray Almighty to rest HIS SOUL IN PEACE.

  3. ಜ್ಞಾನ ಭಂಡಾರ ಕಳೆದು ಕೋ0ಡೆವು
    ಅತ್ಮಕ್ಕೆ ಚಿರ ಶಾಂತಿ ಸಿಗಲಿ

  4. Pray God almighty to rest his soul in peacehis sad demise is a great loss to us.Pray God to give strength to the family to bare the loss

  5. Irreparable loss of a great genius. I learnt a lot on our great mythology, just hearing to Dr.B.G. Acharya’s discourses. Amazing clarity & terrific memory power even at his advanced age. May Lord sustain the grieving family at the loss of this family – head, also unfortunate, unexpected demise of his younger son.
    *AUM SHANTHI*

  6. ಹರಿ, ಹರಿ,
    ಸದಾ ಹರಿಸ್ಮರಣೆ, ಶ್ರೀ ಹರಿಯ ಬಗ್ಗೆ ಚಿಂತನೆ, ವಿದ್ವತ್ ಪೂರ್ಣ ಲೇಖನಗಳು, ಸಹಸ್ರಾರು ಉಪನ್ಯಾಸಗಳು, ಅನುವಾದಗಳು, ಸಾಹಿತ್ಯ ಕೃತಿ ರಚನೆ,ಪತ್ರಕರ್ತರು, ಸಿನಿಮಾ ಸಾಹಿತ್ಯ, ಸತ್ಯ ಮತ್ತು ನಿಷ್ಠುರವಾದಿ, ವಿಷಯಗಳಮೇಲಿನ ಹಿಡಿತ ಮತ್ತು ಪ್ರತಿಪಾದನೆ ಶೈಲಿ,ಸಂಸ್ಕೃತ ಗ್ರಂಥಗಳ ಕನ್ನಡ ಅನುವಾದ, ಅನೇಕ ವ್ಯಕ್ತಿತ್ವದ ಏಕೈಕ ಜ್ಞಾನ ಭಂಡಾರ, ವಿದೇಶಿಯರೂ ಮಾರು ಹೋಗಿ ಅವರ ಶಿಷ್ಯ ರಾಗಿರುವುದು,ಮೇರು ಸದೃಷ ನಮ್ಮನ್ನೆಲ್ಲ ಅಗಲಿರುವುದು ತುಂಬಲಾರದ ನಷ್ಟ.
    ಶ್ರೀ ಹರಿ ಅವರಿಗೆ ಸದ್ಗತಿಯನೀಯಲಿ.

Leave a Reply

Your email address will not be published. Required fields are marked *

error: Content is protected !!