ಬ್ರಹ್ಮಗಿರಿ: ದೇಶದ ಪ್ರತಿಷ್ಟಿತ ಮಾಂಸದ ಸ್ಟೋರ್ ‘ಮೀಟ್ವಾಲೆ’ ಉದ್ಘಾಟನೆ
ಉಡುಪಿ: ದೇಶದ ಪ್ರತಿಷ್ಟಿತ ಮಾಂಸದ ಸ್ಟೋರ್ಗಳಲ್ಲಿ ಒಂದಾದ ‘ಮೀಟ್ವಾಲೆ’, ಉಡುಪಿಯ ಬ್ರಹ್ಮಗಿರಿಯಲ್ಲಿ ತನ್ನ ನೂತನ ಶಾಖೆಯನ್ನು ಪರಿಚಯಿಸಿದ್ದು, ಇದರ ಉದ್ಘಾಟನೆಯನ್ನು ಜಿಲ್ಲಾ ಬಿಲ್ಡರ್ಸ್ ಅಸೋಸಿಯೇಶನ್ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಾಯಸ್ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಉದ್ಯಮಗಳು ಉತ್ತಮ ಪಾತ್ರ ವಹಿಸಿವೆ. ಗ್ರಾಹಕರಿಗೆ ಬೇಕಾಗುವ ಉತ್ತಮ ದರ್ಜೆಯ ಉತ್ಪನ್ನಗಳನ್ನು ಒದಗಿಸಿದರೆ, ಇಲ್ಲಿಯ ಜನ ಉದ್ಯಮವನ್ನು ಬೆಂಬಲಿಸುತ್ತಾರೆ. ಬ್ರಹ್ಮಗಿರಿಯಂತಹ ಪರಿಸರಕ್ಕೆ ಅತ್ಯಗತ್ಯವಾಗಿದ್ದ ಉತ್ತಮ ದರ್ಜೆಯ ತಾಜಾ ಮಾಂಸದ ಮಳಿಗೆ ಆರಂಭವಾಗಿರುವುದು ಉತ್ತಮ ಬೆಳವಣಿಗೆ. ಇಲ್ಲಿಯ ಗ್ರಾಹಕರಿಗೆ ಮೀಟ್ ವಾಲೆ ಸ್ಟೋರ್ ನಿಂದ ಉತ್ತಮ ಸೌಲಭ್ಯಗಳು ದೊರಕುವಂತಾಗಲಿ ಎಂದು ಶುಭ ಹಾರೈಸಿದರು.
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅತೀ ವಂ. ಸ್ಟ್ಯಾನಿ ಬಿ. ಲೋಬೋ ಆಶೀರ್ವಚನ ನಡೆಸಿದರು.
ಮೀಟ್ ವಾಲೆಯ ಸಿಇಓ ಕೃಷ್ಣಕುಮಾರ್ ಮಾತನಾಡಿ, ಮೀಟ್ವಾಲೆಯು ಉತ್ಪನ್ನದ ಗುಣಮಟ್ಟತೆಯಲ್ಲಿ ಯಾವುದೇ ರೀತಿ ರಾಜಿ ಮಾಡದೆ ಆರೋಗ್ಯಭರಿತವಾದ ಉತ್ಮನ್ನಗಳನ್ನು ಗ್ರಾಹಕರಿಗೆ ನೀಡುವಲ್ಲಿಪ್ರಾಮಾಣಿಕ ಸೇವೆ ನೀಡುತ್ತದೆ. ಮೀಟ್ ವಾಲೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಇದರೊಂದಿಗೆ ಲ್ಯಾಬ್ ಟೆಸ್ಟ್ನ ಅನುಮೋದನೆ ಪಡೆದ ತಾಜಾ ಮಾಂಸಗಳು ಹಾಗೂ ಆಂಟಿ ಬಯಾಟಿಕ್ಸ್ ಫ್ರೀ ಚಿಕನ್ ಉತ್ಪನ್ನಗಳನ್ನು ಪೂರೈಸುತ್ತದೆ. ಗ್ರಾಹಕರು ಮೀಟ್ವಾಲೆಯ ಮೊಬೈಲ್ ಅ್ಯಪ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಇಲ್ಲಿ ಸಿಗುವ ಆಫರ್ಗಳ ಕುರಿತು ಮಾಹಿತಿ ಪಡೆದುಕೊಳ್ಳಬಹುದು. ಇದರ ಜೊತೆಗೆ ಟೋಲ್ ಫ್ರೀ ನಂಬರ್ ೧೮೦೦೨೭೦೦೦೨೬ ಗೆ ಕರೆ ಮಾಡಿ ಹೋಂ ಡೆಲಿವರಿ ಸೌಲಭ್ಯ ಕೂಡಾ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯ ರಮೇಶ್ ಕಾಂಚನ್, ಸೌಹಾರ್ದ ಸಮಿತಿ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ನಿವೃತ್ತ ಪೊಲೀಸ್ ಅಧಿಕಾರಿ ಎಚ್. ಡಿ. ಮೆಂಡೊನ್ಸಾ, ಉಡುಪಿ ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ ಫೆಲಿಕ್ಸ್ ಅಳ್ವಾ, ಸಿಂಥಿಯಾ ಮೆಂಡೋನ್ಸಾ, ಕಾರ್ಮಿನ್ ಡಿಸೋಜಾ ಉಪಸ್ಥಿತರಿದ್ದರು.
ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.
ಹೀಟ್ & ಈಟ್ : ರುಚಿ ರಚಿಯಾದ 25 ಕ್ಕೂ ಅಧಿಕ ಬಗೆಯ ವೆಜ್ ಮತ್ತು ನಾನ್ವೆಜ್ ತಿನಿಸುಗಳನ್ನು ನಿಮಗೆ ಅಲ್ಲೇ ತಯಾರಿಸಿ ಕೊಡಲಾಗುತ್ತದೆ. ಇಲ್ಲಿ ಸಿಗುವ ಉತ್ಪನ್ನಗಳು: ತಾಜಾ ಮಿಕ್ಸ್ ಮಟನ್, ಚಿಕನ್ ಬ್ರೆಸ್ಟ್, ಚಿಕನ್ ಫುಲ್ ಲೆಗ್, ಚಿಕನ್ ತಂಗ್ರಿ, ಚಿಕನ್ ಥಿಗ್, ಚಿಕನ್ ವಿಂಗ್ಸ್ ಇತ್ಯಾದಿ ಮಟನ್ ತಿನಿಸುಗಳು: ಮಟನ್ ಶಾಮಿ ಕಬಾಬ್, ಮಟನ್ ಆನಿಯನ್ ಕಬಾಬ್, ಮಟನ್ ಕೋಫ್ತಾ, ಮಟನ್ ಚಾಪ್, ಮಟನ್ ಗಲೌಟಿ ಕಬಾಬ್, ಮಟನ್ ಕಸ್ತೂರಿ ಶೀಖ್ ಕಬಾಬ್.
ಚಿಕನ್ ತಿನಿಸುಗಳು: ಚಿಕನ್ ಕಾಕ್ಟೈಲ್ ಶೀಖ್ ಕಬಾಬ್, ಹರಿಯಾಲಿ ಶೀಖ್ ಕಬಾಬ್, ಖುಷ್ ಖುಷ್ ಶೀಖ್ ಕಬಾಬ್, ಮಲಾಯಿ ಶೀಖ್ ಕಬಾಬ್ಸ್, ಆನಿಯನ್ ಕಬಾಬ್ಸ್, ಬರ್ಗರ್ ಟಿಕ್ಕ, ಚಿಕನ್ ರೈನ್ಬೋ ಶೀಖ್ ಕಬಾಬ್ಸ್, ಚಿಕನ್ ಗಾರ್ಲಿಕ್ ಫಿಂಗರ್, ಚಿಕನ್ ಲಾಲಿಪಾಪ್, ಚಿಕನ್ ನೇಗೆಡ್ಸ್, ಚಿಕನ್ ರೋಸ್ಟೆಡ್ ಮಲಾಯಿ ಟಿಕ್ಕ, ಚಿಕನ್ ರೋಸ್ಟೆಡ್ ಮಸಾಲ ಟಿಕ್ಕ, ಚಿಕನ್ ಕೋಫ್ತಾ, ಚಿಕನ್ ಸಾಸೇಜಸ್ ಪ್ಲೈನ್, ಚಿಕನ್ ಸಾಸೇಜಸ್ ಸ್ಪೈಸಿ, ಚಿಕನ್ ಕಾಕ್ಟೈಲ್ ಸಾಸೇಜಸ್, ಚಿಕನ್ ಶಾಮಿ ಕಬಾಬ್ ಚಿಕನ್ ಸಲಮೀಸ್ನಲ್ಲಿ ಚಿಕನ್ ಸಲಮಿ ಬ್ಲಾಕ್ ಪೆಪ್ಪರ್, ಚಿಕನ್ ಸಲಮಿ ಗ್ರೀನ್ ಚಿಲ್ಲಿ,ಚಿಕನ್ ಸಲಮಿ ಪ್ಲೈನ್, ಚಿಕನ್ ಸಲಮಿ ರೆಡ್ ಪೆಪ್ಪರ್, ಚಿಕನ್ ಸ್ಮೋಕ್ಡ್ ಸಲಮಿ ಅಲ್ಲೇ ತಯಾರಿಸಿ ಖಾದ್ಯ ಪ್ರಿಯರಿಗೆ ಉಣಬಡಿಸಲಾಗುವುದು.
ಇಲ್ಲಿಂದ ಗ್ರಾಹಕರು ಮಾಂಸಗಳನ್ನು ಆನ್ಲೈನ್ ಮೂಲಕ (https://play.google.com/store/apps/details?id=com.meatwale) Company website www.meatwale.comಬುಕ್ಕಿಂಗ್ ಮಾಡಿನೂ ಖರೀದಿಸಬಹುದಾಗಿದೆ. ಇಲ್ಲಿ ತಾಜಾ ಚಿಕನ್ ಹಾಗೂ ಮಟನ್ ಮಾಂಸಗಳು ಸಿಗುತ್ತಿದ್ದು, ಮೀಟ್ವಾಲೆಯ ತಜಾ ಚಿಕನ್ ಹಾಗೂ ಮಟನ್ ಮಾಂಸಗಳು ಬೇಕಾದಲ್ಲಿ 8867659282, 8867659427 ನಂಬರ್ನ್ನು ಸಂಪರ್ಕಿಸಿ ನಿಮ್ಮಿಷ್ಟದ ತಾಜಾ ಮಾಂಸವನ್ನು ಆರ್ಡರ್ ಮಾಡಿ ಮನೆಗೆ ತರಿಸಿಕೊಳ್ಳಬಹುದಾಗಿದೆ, ಅದರಲ್ಲೂ ವಿಶೇಷವಾಗಿ 3 ಕಿಮೀ ವ್ಯಾಪ್ತಿಯವರಿಗೆ ಫ್ರೀ ಹೋಂ ಡೆಲಿವರಿ ಸೌಲಭ್ಯನೂ ಸಿಗಲಿದೆ.
ವರ್ಲ್ಡ್ ಕ್ಲಾಸ್ ಹೈಜೀನ್ ಸರ್ಟಿಫೈಡ್, ಐಎಸ್ಓ 9001-2005 ಸರ್ಟಿಫೈಡ್ ಹಾಗೂ ಹಲಾಲ್ ಪ್ರಮಾಣಿಕೃತ ಕಂಪೆನಿ ಇದಾಗಿದ್ದು, ಇಲ್ಲಿ ಪ್ರೀಮಿಯಮ್ ಟೆಂಡರ್ ಆಂಡ್ ಆಂಟಿಬಯಾಟಿಕ್ ಚಿಕನ್ಸ್ ಹಾಗೂ ಲಾಬ್ ಟೆಸ್ಟ್ ನಿಂದ ಅನುಮೋದನೆ ಪಡೆದ ತಾಜಾ ಚಿಕನ್, ಮಟನ್, ಕಬಾಬ್ಗಳು ಸಿಗುತ್ತದೆ. ಸ್ಥಳೀಯವಾಗಿ ಸಾಕಾಣಿಕೆದಾರಿಂದ ಒಪ್ಪಂದ ಮಾಡಿಕೊಂಡು ಖರೀದಿಸಿ ತಾಜಾ ಮಾಂಸಗಳನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯೂ ಇದೆ.
Good that such a specialised meat shop has opened in Udupi. Udupi was lacking for such an outlet.
But, it is very unfortunate that not a single muslim community leader was invited for the inauguration who are the major shoppers in such outlets.