ಚಿನ್ನದ ಬೆಲೆಯಲ್ಲಿ ಬಾರಿ ಕುಸಿತ! ನಿಮ್ಮ ನಗರದಲ್ಲಿ ಎಷ್ಟಿದೆ ಇಂದಿನ ದರ…?

ದುಬಾರಿ ಡಾಲರ್ ಎದುರು ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿ ಖರೀದಿಗೆ ಹಿಂದೇಟು!

ಜನವರಿಯಲ್ಲಿ ಅತ್ಯಧಿಕ ಏರಿಕೆ ಕಂಡಿದ್ದ ಚಿನ್ನದ ಬೆಲೆ ಬಳಿಕ ಕುಸಿತ ಕಂಡು, ಫೆಬ್ರವರಿ ತಿಂಗಳಿಡೀ ಸ್ಥಿರವಾಗಿತ್ತು. ಆದರೆ ಮಾರ್ಚ್ ತಿಂಗಳಲ್ಲಿ ಮತ್ತೆ ಕುಸಿತದ ಹಾದಿಯಲ್ಲಿದೆ. ಕಳೆದ ವಾರ ಗುರುವಾರ, ಶುಕ್ರವಾರ ಮತ್ತು ಶನಿವಾರ ಸತತ ಕುಸಿತ ಕಂಡ ಬಳಿಕ ಶುದ್ಧ ಚಿನ್ನದ ಬೆಲೆ 15 ಸಾವಿರದೊಳಗೆ ಬಂದು ನಿಂತಿದೆ. ಸೋಮವಾರವೂ ತೀವ್ರ ಕುಸಿತ ಕಂಡಿದ್ದ ಬೆಲೆ, ಬುಧವಾರ ಮತ್ತು ಗುರುವಾರವೂ ಇಳಿಕೆಯನ್ನು ಮುಂದುವರಿಸಿದೆ. ಗುರುವಾರ ಶೇ.5ರಷ್ಟು ಕುಸಿತ ಕಂಡಿದ್ದ ಚಿನ್ನದ ಬೆಲೆ, ಶುಕ್ರವಾರ ಶೇ.2ರಷ್ಟು ಏರಿಕೆ ಕಂಡಿದೆ.

ಆಭರಣ ಚಿನ್ನದ ಬೆಲೆಯೂ ಸತತ ಕುಸಿತದಲ್ಲಿದ್ದು, ಜನವರಿಯಲ್ಲಿ ಪ್ರತಿ ಗ್ರಾಂಗೆ 16 ಸಾವಿರದ ಮೇಲೆ ಇದ್ದ ಬೆಲೆ ಇದೀಗ 13 ಸಾವಿರದೊಳಗೆ ಬಂದಿದೆ. ಎರಡು ತಿಂಗಳಲ್ಲಿ ಪ್ರತಿ ಗ್ರಾಂಗೆ ಮೂರು ಸಾವಿರಕ್ಕೂ ಹೆಚ್ಚು ಕುಸಿತ ಕಂಡಿದೆ.

ಅಮೆರಿಕದ ಫೆಡರಲ್ ರಿಸರ್ವ್ ಕೈಗೊಂಡ ನಿರ್ಧಾರಗಳಿಂದ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಕಾಣುತ್ತಿದೆ. ಜೊತೆಗೆ ಪ್ರಬಲ ಡಾಲರ್ ಎದುರು ಚಿನ್ನ-ಬೆಳ್ಳಿ ಖರೀದಿ ದುಬಾರಿಯಾಗಿದೆ. ಫೆಡರಲ್ ರಿಸರ್ವ್ ದರ ಕಡಿತ ಮಾಡುವ ನಿರೀಕ್ಷೆಯಿಲ್ಲದಿರುವುದು ಗುರುವಾರದ ಶೇ.5ರಷ್ಟು ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಇಂದಿನ ಚಿನ್ನದ ದರ ಹೇಗಿದೆ?

ಮಾರ್ಚ್ 20ರಂದು ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ, ಗುರುವಾರದ ಸಂಜೆಯ ದರಕ್ಕೆ ಹೋಲಿಸಿದರೆ ಪ್ರತಿ ಗ್ರಾಂಗೆ 65 ರೂ. ಏರಿಕೆಯಾಗಿ, 10 ಗ್ರಾಂಗೆ 1,50,930 ರೂ.ಗೆ ತಲುಪಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 60 ರೂ. ಏರಿಕೆಯಾಗಿ 10 ಗ್ರಾಂಗೆ 1,38,350 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 49 ರೂ. ಏರಿಕೆಯಾಗಿ 10 ಗ್ರಾಂಗೆ 1,13,200 ರೂ.ಗೆ ಏರಿದೆ.

ಮಂಗಳೂರಿನಲ್ಲಿ ಚಿನ್ನದ ದರ ಎಷ್ಟು?

ಮಾರ್ಚ್ 20ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ದರ ಅಲ್ಪ ಏರಿಕೆ ಕಂಡಿದೆ.

ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,093 ರೂ. (+65),

22 ಕ್ಯಾರೆಟ್ ಚಿನ್ನ 13,835 ರೂ. (+60),

18 ಕ್ಯಾರೆಟ್ ಚಿನ್ನ 11,320 ರೂ. (+49) ಆಗಿದೆ.

ಸತತ ಕುಸಿತ ಕಾಣುತ್ತಿರುವ ಬೆಳ್ಳಿ

ಮಾರ್ಚ್ ಆರಂಭದಲ್ಲಿ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 9ರಿಂದ ಕುಸಿತದ ಹಾದಿಯಲ್ಲಿದೆ. ಮಾರ್ಚ್ 10ರಂದು ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,90,000 ರೂ.ಗೆ ಏರಿಕೆಯಾದುದು ಹೊರತುಪಡಿಸಿ, ಬಳಿಕ ದಿನನಿತ್ಯ ಕುಸಿತ ಕಂಡಿದೆ. ಕಳೆದ ವಾರ ಗುರುವಾರ ಪ್ರತಿ ಗ್ರಾಂಗೆ 10 ರೂ. ಇಳಿದು 2,80,000 ರೂ.ಗೆ ತಲುಪಿದೆ. ಶನಿವಾರ 5 ರೂ. ಇಳಿದು 2,75,000 ರೂ.ಗೆ ಕುಸಿದಿದೆ. ಮಾರ್ಚ್ 16ರಂದು ಮತ್ತೆ 5 ರೂ. ಇಳಿದು 2,70,000 ರೂ.ಗೆ ತಲುಪಿದರೆ, ಮಂಗಳವಾರ 5 ರೂ. ಏರಿಕೆಯಾಗಿ 2,75,000 ರೂ.ಗೆ ಏರಿದೆ. ಬುಧವಾರ 10 ರೂ. ಕುಸಿತ, ಗುರುವಾರ ಮತ್ತು ಶುಕ್ರವಾರ ತಲಾ 5 ರೂ. ಕುಸಿತ ಕಂಡು ಪ್ರತಿ ಕೆಜಿಗೆ 2,55,000 ರೂ.ಗೆ ಇಳಿದಿದೆ.

ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು)

ದಿಲ್ಲಿ: 24 ಕ್ಯಾರೆಟ್ 15,108 ರೂ. (+65), 22 ಕ್ಯಾರೆಟ್ 13,850 ರೂ. (+60)

ಮುಂಬೈ: 24 ಕ್ಯಾರೆಟ್ 15,093 ರೂ. (+65), 22 ಕ್ಯಾರೆಟ್ 13,835 ರೂ. (+60)

ಅಹಮದಾಬಾದ್: 24 ಕ್ಯಾರೆಟ್ 15,098 ರೂ. (+65), 22 ಕ್ಯಾರೆಟ್ 13,840 ರೂ. (+60)

ಚೆನ್ನೈ: 24 ಕ್ಯಾರೆಟ್ 15,163 ರೂ. (-1), 22 ಕ್ಯಾರೆಟ್ 13,899 ರೂ. (-1)

ಕೋಲ್ಕತ್ತಾ: 24 ಕ್ಯಾರೆಟ್ 15,093 ರೂ. (+65), 22 ಕ್ಯಾರೆಟ್ 13,835 ರೂ. (+60)

ಹೈದರಾಬಾದ್: 24 ಕ್ಯಾರೆಟ್ 15,093 ರೂ. (+65), 22 ಕ್ಯಾರೆಟ್ 13,835 ರೂ. (+60)

ಜೈಪುರ: 24 ಕ್ಯಾರೆಟ್ 15,108 ರೂ. (+65), 22 ಕ್ಯಾರೆಟ್ 13,850 ರೂ. (+60)

ಚಂಡೀಗಢ: 24 ಕ್ಯಾರೆಟ್ 15,108 ರೂ. (+65), 22 ಕ್ಯಾರೆಟ್ 13,850 ರೂ. (+60)

ಲಖನೌ: 24 ಕ್ಯಾರೆಟ್ 15,108 ರೂ. (+65), 22 ಕ್ಯಾರೆಟ್ 13,850 ರೂ. (+60)

1 thought on “ಚಿನ್ನದ ಬೆಲೆಯಲ್ಲಿ ಬಾರಿ ಕುಸಿತ! ನಿಮ್ಮ ನಗರದಲ್ಲಿ ಎಷ್ಟಿದೆ ಇಂದಿನ ದರ…?

  1. ಭಾರೀ ಕುಸಿತ?? 65 ರೂಪಾಯಿ ಏರಿದೆ. ಹೇಗೆ ಕುಸಿತ???

Leave a Reply

Your email address will not be published. Required fields are marked *

error: Content is protected !!