ಶಿರ್ವ ಮಹಿಳಾ ಮಂಡಲ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ- ವಿಶೇಷ ಸಾಧಕರಿಗೆ ಸನ್ಮಾನ

ಶಿರ್ವ: ತಮ್ಮಲ್ಲಿರುವ ಸಹನೆ, ಅಕ್ಕರೆ,ಪ್ರೀತಿ, ಕ್ಷಮಾಗುಣ ಈ ಗುಣಗಳಿಂದಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಮಹತ್ವವನ್ನು ಪಡೆದಿದ್ದಾರೆ.ಸ್ತ್ರೀಯರಲ್ಲಿರುವ ಈ ಅಪರೂಪದ ಗುಣಗಳು ಎಲ್ಲರಿಗೂ ಆದರ್ಶಪ್ರಾಯ ಎಂಬುದಾಗಿ ಅಂತಾರಾಷ್ಟ್ರೀಯ ಲಯನ್ಸ್ ಗವರ್ನರ್ ಹರಿಪ್ರಸಾದ್ ರೈಯವರು ಹೇಳಿದ್ದಾರೆ.

ಅವರು ಶಿರ್ವ ಮಹಿಳಾ ಮಂಡಲದ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಉಡುಪಿಯ ಬೀಡಿನಗುಡ್ಡೆ ಹಿಂದೂ ರುದ್ರ ಭೂಮಿಯಲ್ಲಿ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ವನಜಾ ಪೂಜಾರ್ತಿ ಹಾಗೂ ಕಾರ್ಕಳದ ವಿಜೇತ ವಿಶೇಷ ಚೇತನ ಮಕ್ಕಳ ಶಾಲೆಯ ಪ್ರಾಂಶುಪಾಲೆ ಡಾ.ಕಾಂತಿ ಹರೀಶ್ ಅವರನ್ನು ಈ ಸಂದರ್ಭದಲ್ಲಿ ಅತಿಥಿಗಳು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಂತಿ ಹರೀಶ್ ಅವರು ಜೀವನದಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆಯುವುದೇ ಸಾಧನೆಯ ಮೊದಲ ಮೆಟ್ಟಿಲು .ಅದರ ಜೊತೆಗೆ ಕುಟುಂಬದ ಬೆಂಬಲವೂ ಅತೀ ಅಗತ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಕಿಯಿಲ್ಲದ ಅಡುಗೆ ಸ್ಪರ್ಧೆಯೊಂದಿಗೆ ಉದ್ಯಮಿ ರವೀಂದ್ರ ಶೆಟ್ಟಿ,ಕೊಲ್ಲಬೆಟ್ಟು ಅವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ನೆರವೇರಿಸಿದರು.

ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಡಾ.ಸ್ಪೂರ್ತಿ .ಪಿ.ಶೆಟ್ಟಿಯವರು ವಹಿಸಿದ್ದರು.ಮಹಿಳಾ ಮಂಡಲದ ಗೌರವ ಸಲಹೆಗಾರರಾದ ಗೀತಾ ವಾಗ್ಳೆ ಸ್ವಾಗತಿಸಿ, ಕಾರ್ಯದರ್ಶಿ ಐರಿನ್ ಪಿಂಟೋ ವರದಿ ವಾಚಿಸಿದರು. ಡಾ.ಗೀತಾ ಮಾರ್ಕಾಂಡೇಯ ಅವರು ಕಾರ್ಯಕ್ರವನ್ನು ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ಶಿರ್ವದ “ಅಪ್ಪೆನ ಜೋಕುಲು”ತಂಡವನ್ನು ಗುರುತಿಸಿ ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *

error: Content is protected !!