ಶ್ರೀಮಹಾಕಾಳಿ ಶನಿಶ್ವರ ದೇವಸ್ಥಾನ ಪಿತ್ರೋಡಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಉಡುಪಿ: ಶ್ರೀಮಹಾಕಾಳಿ ಶನಿಶ್ವರ ದೇವಸ್ಥಾನ ಪಿತ್ರೋಡಿ ಇದರ ಮಹಿಳಾ ಮಂಡಳಿ ವತಿಯಿಂದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ದೇವಸ್ಥಾನ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನೋದ ಪೂಜಾರಿ ವಹಿಸಿದ್ದರು. ಮಂದಿರದ ಸದಸ್ಯೆ ಅಶ್ವಿನಿ ಕಿಶೋರ್ ರವರ ಪ್ರಾರ್ಥನೆ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ಕುಂದರ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ನಯನ ಗಣೇಶ್ ಸಾಧಕಿಯರನ್ನು ಸನ್ಮಾನಿಸಿ ಶುಭವನ್ನು ಕೋರಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರನ್ನು ಗುರುತಿಸಿ ಅಭಿನಂದಿಸಲಾಯಿತು.

ವೈದ್ಯಕೀಯ ಕ್ಷೇತ್ರದಲ್ಲಿ ದೀಪ ಕೋಟ್ಯಾನ್, ಕಲಾಕ್ಷೇತ್ರದಲ್ಲಿ ಚಂದ್ರವತಿ ಪಿತ್ರೋಡಿ, ಯೋಗದಲ್ಲಿ ಗಿನ್ನಿಸ್ ದಾಖಲೆ ಮಾಡಿದ ಕುಮಾರಿ ತನುಶ್ರೀ, ಭರತನಾಟ್ಯದಲ್ಲಿ ಕುಮಾರಿ ವಂಶಿ ಕೋಟ್ಯಾನ್, ಕರಾಟೆ ಕ್ಷೇತ್ರದಲ್ಲಿ ಕುಮಾರಿ ಲಾಸ್ಯಯಾದವ್, ವಿದ್ಯಾಭ್ಯಾಸದಲ್ಲಿ ರಾಂಕ್ ಪಡೆದ ಕುಮಾರಿ ದೀಪ್ತಿ ಜತ್ತನ್ ಹೀಗೆ 6 ಮಂದಿ ಸಾಧಕಿಯರನ್ನು ಸನ್ಮಾನ ಮಾಡಲಾಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಚಂದು ಬಂಗೇರ, ಮಹಿಳಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ರೇಖಾ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ವಿಜಯ್ ಕೋಟ್ಯಾನ್ ವೇದಿಕೆಯಲ್ಲಿ ಇದ್ದರು.

ಈ ಸಂದರ್ಭ ವಾಸು ಬಂಗೇರ, ಸುಂದರ್ ಕೋಟ್ಯಾನ್, ಕಿಶೋರ್ ಕುಮಾರ್, ಪುರಂದರ್, ಉದಯ್ ಕೋಟ್ಯಾನ್, ಶಶಿಕಲಾ, ವಿನೋದ, ಅರುಣಾ, ಶೋಭಾ, ಪುಷ್ಪವತಿ, ಸಂಪವತಿ, ವನಜ, ಹರಿನಾಕ್ಷಿ, ದಾಕ್ಷಯಿಣಿ, ಲಾವಣ್ಯ ಯೋಗೀಶ್, ರೇಷ್ಮಾ ಯಾದವ್, ಲಲಿತಾ, ಪುಷ್ಪಾ, ದಿವ್ಯ, ಶ್ವೇತಾ ಸಂತೋಷ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!