ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ
ಉಡುಪಿ: ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಡಾಕ್ಟರ್ ಗೀತಾ ದಿನೇಶ್ ಪುತ್ರನ್ ಅವರನ್ನು ಭಾನುವಾರ ಗೌರವಿಸಲಾಯಿತು.
ಸ್ತ್ರೀ ರೋಗ ತಜ್ಞರಾಗಿ, ಅನೇಕ ಬಡವರಿಗೆ ಧರ್ಮಾರ್ಥ ಹೆರಿಗೆ ಮಾಡಿಸಿ ಬಡ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಉಚಿತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಗೀತಾ ದಿನೇಶ್ ಪುತ್ರನ್ ಅವರನ್ನು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಅವರ ಸ್ವಗ್ರೃಹದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಕ್ರೃಷ್ಣ ಹೆಬ್ಬಾರ್ ರವರು ಡಾಕ್ಟರ್ ಗೀತಾ ದಿನೇಶ್ ರವರ ಸಮಾಜ ಸೇವೆಯನ್ನು ಶ್ಲಾಘಿಸಿದರು. ಸ್ವಸ್ಥ ಹಾಗೂ ಆರೋಗ್ಯಕರ ಸಮಾಜಕ್ಕೆ ಸೇವಾ ಮನೋಭಾವದ ವೈದ್ಯರ ಅವಶ್ಯಕತೆ ಇದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ತಮ್ಮ ವೈದ್ಯಕೀಯ ವ್ರೃತ್ತಿ ಸೇವೆ ಪ್ರಶಂಸನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾಕ್ಟರ್ ಗೀತಾ ಅವರು ಅವರ ವ್ರೃತ್ತಿಯಲ್ಲಿ ನಡೆದ ಅನೇಕ ಘಟನೆಗಳನ್ನು ನೆನಪಿಸಿಕೊಂಡರು. ಈ ಸಂದರ್ಭ ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಗೀತಾ ವಾಗ್ಲೆ, ಹಿರಿಯ ನಾಯಕರಾದ ದಿನೇಶ್ ಪುತ್ರನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಮೀನಾಕ್ಷಿ ಮಾಧವ ಬನ್ನಂಜೆ, ರಮಾದೇವಿ,ಪುಷ್ಪ ಅಂಚನ್, ಸಂಧ್ಯಾ ತಿಲಕ್ ರಾಜ್, ಶಾಂತಾ ರೈ, ರೋಶನಿ ಶೆಟ್ಟಿ, ಜಯಶ್ರೀ ಶೇಟ್, ಶೋಭಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.





