ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ‘ಶ್ರೀವಿದ್ಯಾ ಶ್ರೀಚಕ್ರ ಯಂತ್ರ ಪೂಜೆ’

ಕಾಪು: ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ‘ಮಾತೃ ಕಾರ್ಯಕ್ರಮಗಳ ಮೂರನೇ ದಿನವಾದ ಸೋಮವಾರ ‘ಶ್ರೀ ವಿದ್ಯಾ ಶ್ರೀಚಕ್ರಯಂತ್ರ ಪೂಜೆ’ ನಡೆಯಿತು.

ಕ್ಷೇತ್ರದ ಪ್ರಧಾನ ತಂತ್ರಿ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ.ಕುಮಾರ ಗುರು ತಂತ್ರಿ ನೇತೃತ್ವದಲ್ಲಿ ಪ್ರಧಾನ ಆರ್ಚಕ ವೇದ ಮೂರ್ತಿ ಶ್ರೀನಿವಾಸ ತಂತ್ರಿ ಸಹಭಾಗಿತ್ವ ದಲ್ಲಿ ಬೆಳಗ್ಗೆ 6.15ರಿಂದ ಗದ್ದುಗೆಯ ಶ್ರೀಚಕ್ರ ಯಂತ್ರೋದ್ಧಾರ ನೆರವೇರಿಸಿ ಬಳಿಕ ದಿವ್ಯ ಶ್ರೀ ಚಕ್ರಯಂತ್ರ ದರ್ಶನ, ಖಡ್ಗಮಾಲಾ ಮಂತ್ರ ಹೋಮ ನಡೆಸಲಾಯಿತು.

ಬೆಳಗ್ಗೆ 11ರಿಂದ ಶ್ರೀಯಂತ್ರಪ್ರಸನ್ನ ಪೂಜೆ, ಸಂಜೆ 5ರಿಂದ ಚತುಃಷಷ್ಟಿ ಉಪಚಾರ ಪೂಜಾ ಹಾಗೂ ಗದ್ದುಗೆಯಲ್ಲಿ ಶ್ರೀಚಕ್ರ ಯಂತ್ರದ ಮರುಸ್ಥಾಪಿಸಿದ ಬಳಿಕ ಪ್ರಸಾದ ವಿತರಣೆ ನಡೆಯಿತು. ಭಕ್ತಾದಿಗಳು ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಪಡೆಯಲು ಅವಕಾಶ ವಿರುವ ಗದ್ದುಗೆಯಲ್ಲಿ ಸ್ಥಾಪಿಸಿರುವ ‘ಅಮ್ಮನ ಶ್ರೀಚಕ್ರ ದರ್ಶನ ಪಡೆದುಕೊಂಡರು.

ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಮತ್ತು ಮಾತೃ ವೈಭವ ಸೇವಾ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ರವಿ ಕಿರಣ್, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ರವಿ ಸುಂದರ್ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ಉಪಾಧ್ಯಕ್ಷರಾದ ಮಾಧವ ಆರ್ ಸಾಲ್ಯಾನ್, ಮನೋಹರ ಎಸ್.ಶೆಟ್ಟಿ. ಕಾಪು ದಿವಾಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಮಾತೃ ವೈಭವ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಬಾಲಾಜಿ, ಕಾರ್ಯಾಧ್ಯಕ್ಷರಾದ ಭಗವಾನ್‌ ದಾಸ್ ಶೆಟ್ಟಿಗಾರ್, ಪ್ರಭಾಕರ ಪೂಜಾರಿ, ಕಾರ್ಯದರ್ಶಿ ಜಯರಾಮ ಆಚಾರ್ಯ, ಧಾನಿಗಳಾದ ಸುಧಾಕರ ಹೆಗ್ಡೆ ತುಂಗಾ, ನ್ಯಾಯವಾದಿ ಮಹೇಶ್ ಕೋಟ್ಯಾನ್ ಮುಂಬಯಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶೇಖರ್ ಸಾಲ್ಯಾನ್, ಮನೋಹರ ರಾವ್ ಕಲ್ಯ, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎನ್. ಶೆಟ್ಟಿ, ಚರಿತಾ ದೇವಾಡಿಗ, ಹರಿಯಪ್ಪ ಕೋಟ್ಯಾನ್, ಶ್ರೀಕರ್ ಶೆಟ್ಟಿ ಕಲ್ಯ, ಬೀನಾ ವಿ. ಶೆಟ್ಟಿ ಶಿಲ್ಪಾ ಸುವರ್ಣ, ಸಾವಿತ್ರಿ ಗಣೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!