ಉಡುಪಿ: ಫೆ.28ರಂದು ಜನಪದ ದೇಶೀಯ ಕಲೆಯ ಸರಣಿ ಕಾರ್ಯಾಗಾರ ಉದ್ಘಾಟನೆ
ಉಡುಪಿ: ಭಾವನಾ ಪೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವೆಂಟನಾ ಪೌಂಡೇಶನ್ ಸಹಯೊಗದಲ್ಲಿ ಆಯೋಜಿಸುತ್ತಿರುವ ಜನಪದ ದೇಶೀಯ ಕಲೆಯ ಸರಣಿ ಕಾರ್ಯಾಗಾರವು ಫೆ.28 ರಂದು ಫೌಂಡೇಶನ್‌ನ ಶಿಲ್ಪಾ ಭಟ್‌ರವರಿಂದ ಬಡಗುಪೇಟೆಯ ಗ್ಯಾಲರಿಯಲ್ಲಿ ಉದ್ಘಾಟನೆಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ಉಡುಪಿ ಸೀರೆಯ ವಸ್ತ್ರ ವಿನ್ಯಾಸಕಿ ಮಮತಾ ರೈ ಭಾಗವಹಿಸಲಿದ್ದು, ಭಾವನಾ ಫೌಂಡೇಶನ್‌ನ ನಿರ್ದೇಶಕ ಹಾವಂಜೆ ಮಂಜುನಾಥಯ್ಯರ ಉಪಸ್ಥಿತರಿರುವರು. ಸರಣಿಯ ಹದಿನೆಂಟನೆಯ ದೇಶೀಯ ಕಲಾ ಕಾರ್ಯಾಗಾರದಲ್ಲಿ ಬಟ್ಟೆಯ ಮೇಲೆ ರಚಿಸಲ್ಪಡುವ ಗುಜರಾತ್‌ನ ಕಲಮ್‌ಕಾರೀ ಹಾಗು ಮಾತಾ ನೀ ಪಚೇಡಿ ಚಿತ್ರಕಲೆಯನ್ನು ಕಲಾವಿದರಾದ ಜಗದೀಶ್ ಚಿತ್ತಾರ ಕಲಿಸಿಕೊಡುತ್ತಿದ್ದು, ಫೆ.28 ಮತ್ತು ಮಾರ್ಚ್ 1 ರಂದು ಈ ಕಲೆಯನ್ನು ಪರಿಚೈಸಲಾಗುತ್ತಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಾರ್ಯಾಗಾರದ ಸಂಯೋಜಕ ಡಾ.ಜನಾರ್ದನ ಹಾವಂಜೆ (+91 98456 50544)ಯವರನ್ನು ಸಂಪರ್ಕಿಸಬಹುದು.





