ಫೆ.14ರಂದು ಪ್ರೇಮಿಗಳಿಗೆ ಎಚ್ಚರಿಕೆ ನೀಡಿದ ಶ್ರೀರಾಮಸೇನೆ

ಉಡುಪಿ: ಪ್ರತೀ ವರ್ಷ ಫೆಬ್ರವರಿ 14 ರಂದು ಭಾರತೀಯರು ಮರೆಯಲಾಗದ ದಿನ. 2019 ಫೆ.14 ರಂದು ಜಮ್ಮು – ಶ್ರೀನಗರದಲ್ಲಿ 40 ಜನ ನಮ್ಮ ವೀರಯೋಧರು ಹುತಾತ್ಮರಾದರು. ಆ ನೋವು ಇನ್ನೂ ನಮ್ಮ ಹೃದಯದಲ್ಲಿದೆ. ದೇಶಕ್ಕಾಗಿ ಹುತಾತ್ಮರಾದ ನಮ್ಮ ಭಾರತಾಂಬೆಯ ಪುತ್ರರನ್ನು ಗೌರವಿಸಬೇಕೇ ಹೊರತು, ಗುಲಾಬಿ ಹೂವನ್ನಲ್ಲ. ಪಾಶ್ಚಾತ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರೇಮಿಗಳ ದಿನಾಚರಣೆ ( ಫೆ. 14ನ್ನು ಯಾರು ಸಹ ಆಚರಿಸಬೇಡಿ.

ಆ ದಿನ ನಮ್ಮ ಹುತಾತ್ಮರಾದ ನಮ್ಮ ಯೋಧರಿಗಾಗಿ ಪ್ರಾರ್ಥಿಸೋಣ,
ಪ್ರೇಮಿಗಳು ಅಂದು ಪಾರ್ಕ್, ಮಾಲ್, ಪ್ರೇಕ್ಷಣೀಯ ಹಾಗೂ ಇನ್ನಿತ್ತರ ಸ್ಥಳಗಳಲ್ಲಿ ಅಸಭ್ಯವಾಗಿ ಕಂಡುಬಂದಲ್ಲಿ, ಅದನ್ನು ಶ್ರೀರಾಮಸೇನೆಯು ಗಂಭೀರವಾಗಿ ಪರಿಗಣಿಸಿ, ಅಂತ ಪ್ರೇಮಿಗಳಿಗೆ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರಯೋಧರ ಬಗ್ಗೆ ಮಾಹಿತಿ ನೀಡುತ್ತೇವೆ. ಅದರಂತೆ ಸ್ಥಳೀಯ ಆರಕ್ಷಕ ಠಾಣೆ ಹಾಗೂ ಪೊಲೀಸ್ ಹಿರಿಯ ಅಧಿಧಿಕಾರಿಯವರಿಗೆ ಮತ್ತು ಪ್ರೇಮಿಗಳ ಹೆತ್ತವರಿಗೆ ಮಾಹಿತಿ ನೀಡಲಾಗುವುದು ಎಂದು ಶ್ರೀರಾಮಸೇನೆಯ ಮಂಗಳೂರು ವಿಭಾಗ ಅಧ್ಯಕ್ಷ ಜಯರಾಂ ಅಂಬೆಕಲ್ಲು ಪ್ರೇಮಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!