ಮಂಗಳೂರು-ಮುಂಬೈ ನಡುವೆ ರೈಲು ಸಂಚಾರಕ್ಕೆ ಕೊಂಕಣ ರೈಲ್ವೆ ಅನುಮತಿ
ಮಂಗಳೂರು: ಕರಾವಳಿ ಭಾಗದ ಜನರ ಬಹುದಿನದ ಬೇಡಿಕೆ ಕೊನೆಗೂ ಈಡೇರುವ ಕಾಲ ಕೂಡಿಬಂದಿದೆ. ಮಂಗಳೂರು-ಮುಂಬೈ ನಡುವೆ ರೈಲು ಸಂಚಾರಕ್ಕೆ ಕೊಂಕಣ ರೈಲ್ವೆ ಅನುಮತಿ ನೀಡಿದ್ದು, ಡಿಸೆಂಬರ್ 17 ರಿಂದ ರೈಲು ಸಂಚಾರ ಪ್ರಾರಂಭವಾಗಲಿದೆ. ಲಾಕ್ ಡೌನ್ ಸಡಿಳಿಕೆ ಬಳಿಕ ರೈಲು ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿತ್ತು. ಅದರಂತೆ, ಮಂಗಳೂರು ಸೆಂಟ್ರಲ್-ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್ ನಡುವೆ ಹಬ್ಬದ ವಿಶೇಷ ರೈಲು ಡಿಸೆಂಬರ್ 17 ರಿಂದ 31ರ ತನಕ ಸಂಚಾರ ನಡೆಸಲಿದೆ. ಪ್ರತಿ ದಿನ ಮಂಗಳೂರು ಸೆಂಟ್ರಲ್-ಮುಂಬೈ ನಡುವೆ ಹಬ್ಬದ ವಿಶೇಷ ರೈಲನ್ನು ಓಡಿಸಲಾಗುತ್ತಿದ್ದು, ರೈಲು ನಂಬರ್ 02620/02619 ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವೇಳಾಪಟ್ಟಿ; ರೈಲ್ ನಂ. 02620 ಮಂಗಳೂರು-ಮುಂಬೈ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಧ್ಯಾಹ್ನ 2.25ಕ್ಕೆ ಹೊರಡದ್ದು, ಸುರತ್ಕಲ್ (3.10), ಮೂಲ್ಕಿ, ಉಡುಪಿ (3.45), ಕುಂದಾಪುರ (4.15), ಬೈಂದೂರು, ಭಟ್ಕಳ, ಮರುಡೇಶ್ವರ, ಹೊನ್ನಾವರ, ಕುಮುಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ, ಮಡಗಾಂವ್, ಕುಡಾಲ್, ರತ್ನಗಿರಿ, ಖೇಡ್, ಮನಗಾಂವ್, ಪನ್ವೇಲ್, ಥಾಣೆ ಮೂಲಕ ಲೋಕಮಾನ್ಯ ತಿಲಕ್ ಟರ್ಮಿನಲ್ ತಲುಪಲಿದೆ. ಇನ್ನು ರೈಲು ನಂ. 02619 ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್ನಿಂದ ಮಧ್ಯಾಹ್ನ 320ಕ್ಕೆ ಹೊರಡಲಿದ್ದು, ಬೈಂದೂರಿಗೆ ಮರುದಿನ ಮುಂಜಾನೆ 4.42ಕ್ಕೆ ಆಗಮಿಸಲಿದೆ. ಕುಂದಾಪುರ (5.10), ಉಡುಪಿ (5.45), ಸುರತ್ಕಲ್ (6.23) ಮೂಲಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಬೆಳಗ್ಗೆ 7.30ಕ್ಕೆ ತಲುಪಲಿದೆ. |