ರಾಮಮಂದಿರ ನಿಧಿ ಸಂಗ್ರಹ ಅಭಿಯಾನ – ಚೆನ್ನೈಯಲ್ಲಿ ಉದ್ಯಮಿಗಳ ಸಮಾವೇಶ: ಕೆ.ರಾಜೇಶ್ ರಾವ್

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ಶ್ರೀ ರಾಮಮಂದಿರ ನಿರ್ಮಾಣಕ್ಕೆ ದೇಶದ ಸಮಸ್ತ ಜನತೆಯ ಸಹಕಾರ ಪಡೆಯುವ ಉದ್ದೇಶದಿಂದ ಜನವರಿ 15 ರಿಂದ ದೇಶಾದ್ಯಂತ ನಿಧಿ ಸಂಗ್ರಹ ಅಭಿಯಾನ ನಡೆಯಲಿದೆ . ಈ ಉದ್ದೇಶಕ್ಕಾಗಿ ತಮಿಳುನಾಡಿನ ಉದ್ಯಮಿಗಳ ಸಮಾವೇಶವನ್ನು ಚೆನ್ನೈ ನಲ್ಲಿ ನಡೆಸಲಾಗುವುದು ಎಂದು ಜಗತ್ಪ್ರಸಿದ್ಧ ವುಡ್ ಲ್ಯಾಂಡ್ಸ್ ಹೋಟೆಲ್ಸ್ ನ ಪಾಲುದಾರ ತರುಣ ಉದ್ಯಮಿ ಕೆ. ರಾಜೇಶ್ ರಾವ್ (ಮಂಗಳೂರಿನ ಕಡಂದಲೆಯವರು) ತಿಳಿಸಿದ್ದಾರೆ .

ಚೆನ್ನೈ ಮೈಲಾಪುರದಲ್ಲಿರುವ  ವುಡ್ ಲ್ಯಾಂಡ್ಸ್ ಹೋಟೆಲ್ ಅತಿಥಿ ಗೃಹದಲ್ಲಿ ಅಯೋಧ್ಯೆ ಶ್ರೀ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರೊಂದಿಗೆ ನಡೆಸಿದ ಸಮಾಲೋಚನೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶ್ರೀ ರಾವ್ , ತಮಿಳುನಾಡಿನ ಸ್ವರ್ಣ , ವಸ್ತ್ರ , ಹೋಟೆಲ್ , ರಿಯಲ್ ಎಸ್ಟೇಟ್ , ಸಾಫ್ಟ್ ವೇರ್ , ಹೀಗೆ ವಿವಿಧ ಉದ್ಯಮಿಗಳ ದೊಡ್ಡ ಸಮೂಹವಿದ್ದು ಅವರೆಲ್ಲರನ್ನು ಸೇರಿಸಿಕೊಂಡು ಒಂದು ದೊಡ್ಡ ಸಮಾವೇಶ ನಡೆಸಲಾಗುವುದು .

ಇದರಲ್ಲಿ ಪೇಜಾವರ ಶ್ರೀಗಳು ಭಾಗವಹಿಸಿ ಮಾರ್ಗದರ್ಶನ ನೀಡುವಂತೆ ವಿನಂತಿಸಲಾಗಿದ್ದು ಅವರು ಒಪ್ಪಿಗೆಯನ್ನೂ ಸೂಚಿಸಿದ್ದಾರೆ . ಈ ಸಮಾವೇಶ ದಲ್ಲಿ ಪ್ರತೀ ಉದ್ಯಮಿಗಳೂ ತಮ್ಮ ದೇಣಿಗೆಯನ್ನು ಶ್ರೀಗಳ ಮೂಲಕ ಅಯೋಧ್ಯೆ ಮಂದಿರ ಟ್ರಸ್ಟ್ ಗೆ ಹಸ್ತಾಂತರಿಸುವರು .ಎಂದು ಉಡುಪಿ ಕೃಷ್ಣ ಮಠ ಮತ್ತು ಅಷ್ಟ ಮಠಗಳ‌ ವಿಶೇಷ ಭಕ್ತರೂ ಆಗಿರುವ ರಾಜೇಶ್ ರಾವ್ ತಿಳಿಸಿದ್ದಾರೆ .ಈ ಸಮಾಲೋಚನಾ ಸಭೆಯಲ್ಲಿ ವುಡ್ ಲ್ಯಾಂಡ್ಸ್ ಸಮೂಹದ ಮತ್ತೋರ್ ಹಿರಿಯರಾದ ಕೆ. ಮುರಳಿ ರಾವ್ ತಮಿಳುನಾಡಿನ ಸಂಘ ಪರಿವಾರದ ಪ್ರಮುಖರೂ ಉಪಸ್ಥಿತರಿದ್ದರು .

ಸಂತ ಸಮಾವೇಶ : ಇದೇ ಉದ್ದೇಶಕ್ಕಾಗಿ ಚೆನ್ನೈನಲ್ಲಿ ತಮಿಳುನಾಡಿನ ನೂರಾರು ಸಾಧು ಸಂತರು, ಮಠಾಧೀಶರು , ಧಾರ್ಮಿಕ ಮುಖಂಡರ ಸಮಾವೇಶವನ್ನೂ ಜನವರಿ ತಿಂಗಳಲ್ಲಿ ಆಯೋಜಿಸಿ ಅವರೆಲ್ಲರ ಮಾರ್ಗದರ್ಶನ ಸಹಕಾರ ಪಡೆಯಲಾಗುವುದು ಎಂದು ತಮಿಳುನಾಡಿನ‌ ಉತ್ತರ ಪ್ರಾಂತ ವಿಶ್ವ ಹಿಂದು ಪರಿಷತ್ ಅಧ್ಯಕ್ಷ , ನ್ಯಾಯವಾದಿಯೂ ಆಗಿರುವ ಶ್ರೀನಿವಾಸನ್ ಶ್ರೀಗಳಿಗೆ ತಿಳಿಸಿದ್ದು ಈ ಸಮಾವೇಶದಲ್ಲೂ ಪೇಜಾವರ ಶ್ರೀಗಳು ಭಾಗವಹಿಸುವಂತೆ ಭಿನ್ನವಿಸಿದ್ದಾರೆ .

Leave a Reply

Your email address will not be published. Required fields are marked *

error: Content is protected !!