ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ

ಉಡುಪಿ: ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸರಳೇಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ಸರಳಬೆಟ್ಟು ನಗರಸಭಾ ಬಿಜೆಪಿ ಸದಸ್ಯೆ ವಿಜಯಲಕ್ಷ್ಮೀ ಅವರ ಸಹೋದರ ಮಂಜುನಾಥ್ ಕಾಮತ್(51) ಎಂದು ಗುರುತಿಸಲಾಗಿದೆ.  ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಅವಿವಾಹಿತರಾಗಿದ್ದು, ಮಣಿಪಾಲ ಸುತ್ತಮುತ್ತ  ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!