ಮಣಿಪಾಲ: ಬೈಕ್‌ಗಳಿಂದ ವಶಪಡಿಸಿಕೊಳ್ಳಲಾದ 120 ಸೈಲೆನ್ಸರ್‌ಗಳ ನಾಶ

ಮಣಿಪಾಲ, ಫೆ.7: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ಗಳಿಂದ ವಶಪಡಿಸಿಕೊಳ್ಳಲಾದ ಕರ್ಕಶ ಶಬ್ದ ಮಾಡುವ ನೂರಾರ ಮಾರ್ಪಡು ಸೈಲೆನ್ಸರ್‌ಗಳನ್ನು ಶನಿವಾರ ರೋಲರ್ ಬಳಸಿ ನಾಶಪಡಿಸಲಾಯಿತು.

ಬೈಕ್‌ಗಳಲ್ಲಿ ಕರ್ಕಶ ಶಬ್ದ ಮಾಡುವ ಮಾರ್ಪಡು ಮಾಡಲಾದ ಸೈಲೆನ್ಸರ್‌ಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕಳೆದ 6 ತಿಂಗಳಿನಿಂದ ಮಣಿಪಾಲ ಠಾಣಾ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ವಿಶೇಷ ತಪಾಸಣೆ ಕಾರ್ಯವನ್ನು ನಡೆಸಲಾಗಿತ್ತು.

ಮಣಿಪಾಲ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ನಡೆದ ಈ ವಿಶೇಷ ತಪಾಷಣೆಯಲ್ಲಿ ಒಟ್ಟು 120 ಮಾರ್ಪಡು ಮಾಡಲಾದ ಸೈಲೆನ್ಸರ್ ಗಳನ್ನು ಪತ್ತೆ ಹಚ್ಚಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಒಟ್ಟು 120 ಈ ಪ್ರಕರಣಗಳಲ್ಲಿ ಒಟ್ಟು 1,05,000ರೂ. ದಂಡವನ್ನು ವಸೂಲಿ ಮಾಡಲಾಗಿತ್ತು.

ವಶಪಡಿಸಿಕೊಳ್ಳಲಾದ 120 ಸೈಲೆನ್ಸರ್‌ಗಳನ್ನು ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕರ್ ಸಮಕ್ಷಮದಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಮುಂದೆ ರೋಲರ್ ಮೂಲಕ ನಾಶ ಪಡಿಸಲಾಯಿತು. ಈ ಸಂದರ್ಭ ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!