ನೂತನ ಕ್ರೈಸ್ತ ಧರ್ಮಾಧ್ಯಕ್ಷರಿಗೆ ಉಡುಪಿ ಕಥೋಲಿಕ್ ಸೊಸೈಟಿಯಿಂದ ಅಭಿನಂದನೆ
ಉಡುಪಿ: ಉಡುಪಿ ಕಥೋಲಿಕ್ ಧರ್ಮ ಪ್ರಾಂತದ ನೂತನ ಧರ್ಮಾಧ್ಯಕ್ಷರಾಗಿ ನೇಮಕಗೊಂಡ ಶಿರ್ವ ಆರೋಗ್ಯ ಮಾತಾ ದೇವಾಲಯದ ಧರ್ಮಗುರುಗಳಾದ ಅತೀ ವಂದನೀಯ ಡಾ| ಲೆಸ್ಲಿ ಕ್ಲಿಫರ್ಡ್ ಡಿ’ಸೋಜ ರವರನ್ನು ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ, ಧರ್ಮಗುರುಗಳ ಕಛೇರಿಯಲ್ಲಿ ಸಂಘದ ಅಧ್ಯಕ್ಷ ಲೂವಿಸ್ ಲೋಬೊರವರು ಶಾಲು ಹೊದಿಸಿ, ಹೂ-ಗುಚ್ಛ ನೀಡಿ ಅಭಿನಂದಿಸಿದರು.
ಅವರ ಧರ್ಮಾಧ್ಯಕ್ಷ ಸೇವಾವಧಿಯಲ್ಲಿ ಸಮಾಜದ ಅಭಿವೃದ್ಧಿಗಾಗಿ ಸಂಘದಿಂದ ಸಂಪೂರ್ಣ ಸಹಕಾರವನ್ನು ನೀಡುವ ಭರವಸೆಯೊಂದಿಗೆ, ಅವರ ಎಲ್ಲಾ ಮುಂದಿನ ಸೇವಾ ಯೋಜನೆಗಳಿಗೆ ಯಶಸ್ಸನ್ನು ಹಾರೈಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಪರ್ಸಿ ಜೆ. ಡಿ’ಸೋಜ, ರಾಬರ್ಟ್ ಮ್ಯಾಕ್ಸಿಂ ಡಿ’ಸೋಜ, ವಿಲಿಯಂ ಬಿ. ಮಚಾದೋ, ಜೆನೆವೀವ್ ಮರಿನ ಮಿನೇಜಸ್, ಸಂಘದ ಪ್ರಧಾನ ವ್ಯವಸ್ಥಾಪಕ ಸಂದೀಪ್ ಎ. ಫೆರ್ನಾಂಡಿಸ್, ಶಿರ್ವ ಶಾಖಾ ವ್ಯವಸ್ಥಾಪಕಿ ಶೀತಲ್ ಮರಿಯಾ ಡಿ’ಸೋಜ, ಶಿರ್ವ ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷ ಜುಲಿಯಾನ್ ರೊಡ್ರಿಗಸ್ ಮತ್ತು ಆರ್ಥಿಕ ಸಮಿತಿಯ ಸದಸ್ಯ ಮೆಲ್ವಿನ್ ಮ್ಯಾಕ್ಸಿಂ ಅರಾನ್ಹ ಉಪಸ್ಥಿತರಿದ್ದರು.





