ಮುಂಬೈ ಗುರು ನಾರಾಯಣ ತುಳು ನಾಟಕೋತ್ಸವದಲ್ಲಿ ಗಂಗಾಧರ್ ಕಿದಿಯೂರ್ ವಿರಚಿತ “ಬಗ್ಗನ ಭಾಗ್ಯ” ಪ್ರಥಮ

ಮುಂಬೈ: ಬಿಲ್ಲವರ ಅಸೋಸಿಯೇಷನ್ ಮುಂಬೈ ವತಿಯಿಂದ ಆಯೋಜಿಸಲಾದ ಗುರು ನಾರಾಯಣ ತುಳು ನಾಟಕೋತ್ಸವ– 2026ರಲ್ಲಿ, ಬಿಲ್ಲವರ ಅಸೋಸಿಯೇಷನ್ ಮೀರಾ ರೋಡ್ ಕಲಾವಿದರು ಅಭಿನಯಿಸಿದ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗಂಗಾಧರ್ ಕಿದಿಯೂರ್ ವಿರಚಿತ “ಬಗ್ಗನ ಭಾಗ್ಯ” ಜಾನಪದ ತುಳು ನಾಟಕವು ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ.

ನಾಟಕೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟ ಒಟ್ಟು 15 ತುಳು ನಾಟಕಗಳ ಪೈಕಿ “ಬಗ್ಗನ ಭಾಗ್ಯ” ನಾಟಕವು ವಿಶಿಷ್ಟ ಕಥಾವಸ್ತು, ಕಲಾವಿದರ ನೈಜ ಹಾಗೂ ಪ್ರಭಾವಶೀಲ ಅಭಿನಯ, ಹಾಗೂ ಅಶೋಕ್ ಕುಮಾರ್ ವಳದೂರು ಅವರ ದಕ್ಷ ನಿರ್ದೇಶನದ ಮೂಲಕ ಪ್ರಥಮ ಸ್ಥಾನ ಸಹಿತ 8 ಪ್ರಮುಖ ಪ್ರಶಸ್ತಿಗಳನ್ನು ಪಡೆದು ಪ್ರೇಕ್ಷಕರ ಭಾರೀ ಮೆಚ್ಚುಗೆಗೆ ಪಾತ್ರವಾಯಿತು.

ಉಡುಪಿ ತುಳುಕೂಟದ ಪ್ರಧಾನ ಕಾರ್ಯದರ್ಶಿಯಾಗಿರುವ ಗಂಗಾಧರ್ ಕಿದಿಯೂರ್ ಅವರು 20ಕ್ಕೂ ಅಧಿಕ ತುಳು ಹಾಗೂ ಕನ್ನಡ ನಾಟಕಗಳನ್ನು ರಚಿಸಿರುವ ಹಿರಿಯ ನಾಟಕಕಾರರು. ತುಳು ನಾಟಕಗಳ ಸಮಗ್ರ ಸಂಪುಟ ರಚಿಸಿರುವುದರ ಜೊತೆಗೆ, ತುಳು ಲಿಪಿಯಲ್ಲಿ ಕೂಡ ನಾಟಕಗಳನ್ನು ರಚಿಸಿದ್ದಾರೆ. ಅವರ “ಬಗ್ಗನ ಭಾಗ್ಯ” ನಾಟಕವು ತುಳುನಾಡಿನ ಅವಳಿ ವೀರರಾದ ಕೋಟಿ–ಚೆನ್ನಯರ ಕಥಾಹಂದರವನ್ನು ಆಧರಿಸಿದೆ.

Leave a Reply

Your email address will not be published. Required fields are marked *

error: Content is protected !!