ಪರಿಶಿಷ್ಟ ಜಾತಿ ಪಂಗಡದ ಮುಖ್ಯಮಂತ್ರಿ ಆರೋಗ್ಯ ವಿಮಾ ಯೋಜನೆಯ ಸಭೆ
ಉಡುಪಿ: ನಗರಸಭೆಯ ಪರಿಶಿಷ್ಟ ಜಾತಿ ಪಂಗಡದ ಮುಖ್ಯಮಂತ್ರಿ ಆರೋಗ್ಯ ವಿಮಾ ಯೋಜನೆಯ ಬಗ್ಗೆ ನಗರಸಭಾ ಪೌರಾಯುಕ್ತರ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ ನಗರಸಭೆಯಲ್ಲಿ ವಾರ್ಡ್ ಮಟ್ಟದ ಸಭೆ ನಡೆಯಿತು.
ಈ ಸಭೆಯಲ್ಲಿ ಆರೋಗ್ಯ ಕಾರ್ಡ್‌ನ ಲೋಪದೋಷಗಳ ಪ್ರಶ್ನೆಗಳಿಗೆ ಹೆಚ್‌ಡಿಎಫ್‌ಸಿ ವಿಮಾ ಕಂಪೆನಿಯ ಉಡುಪಿ ದಕ್ಷಿಣ ಕನ್ನಡ ವಿಭಾಗದ ಜನರಲ್ ವ್ಯವಸ್ಥಾಪಕ ನಾಗರಾಜ್ ಪ್ರಭು ಉತ್ತರಿಸಿ ಕಾರ್ಡ್ ಬಗ್ಗೆಗಿನ ಗೊಂದಲಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಈ ಸಭೆಯ ನೇತೃತ್ವ ವಹಿಸಿದ ದಿನೇಶ್ ಮೂಡುಬೆಟ್ಟು, ಸಮಾಜಸೇವಕರಾದ ದಯಾನಂದ್ ಕಪ್ಪೆಟ್ಟು, ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷರಾದ ಗಣೇಶ್ ನೆರ್ಗಿ, ನಗರಸಭಾ ಮಾಜಿ ಅಧ್ಯಕ್ಷ ಯುವರಾಜ್ ಪುತ್ತೂರು, ಶೈಲೇಶ್ ಪುತ್ತೂರು, ಸುಮಿತ್ ನೆರ್ಗಿ, ರಾಜೇಶ್ ಕೆಮ್ಮಣ್ಣು, ಗುಣವಂತ ತೊಟ್ಟಂ, ಶಿವಾನಂದ ಮೂಡುಬೆಟ್ಟು, ಮಾಜಿ ನಗರಸಭಾ ಸದಸ್ಯರಾದ ರಾಜು ಚಿಟ್ಪಾಡಿ,ಸುವಿಜ್ ಚೆಂಡ್ಕಳ, ಮಹೇಶ್ ಚೆಂಡ್ಕಳ, ಅವಿನಾಶ್ ಚೆಂಡ್ಕಳ ಉಡುಪಿಯ ವಿವಿಧ ಆಸ್ಪತ್ರೆ ಗಳ ಇನ್ಶೂರೆನ್ಸ್ ವಿಭಾಗದ ಮುಖ್ಯಸ್ಥರುಗಳು, ನಗರಸಭೆಯ ಕಂದಾಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.





