ಸಾಮಾಜಿಕ ಮಾಧ್ಯಮದಲ್ಲಿ ದ್ವೇಷಪೂರಿತ ಪೋಸ್ಟ್‌ ಹಂಚಿದ ಉದ್ಯಮಿ ಹಾಗೂ ಬ್ಯಾಂಕ್‌ನ ವ್ಯವಸ್ಥಾಪಕನ ಬಂಧನ

ಬ್ರಹ್ಮಾವರ: ಸಾಮಾಜಿಕ ಮಾಧ್ಯಮದಲ್ಲಿ ದ್ವೇಷಪೂರಿತ ಪೋಸ್ಟ್‌ಗಳನ್ನು ಹಂಚಿಕೊಂಡ ಇಬ್ಬರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಕುಂದಾಪುರ‌ ಶಾಖೆಯ ವ್ಯವಸ್ಥಾಪಕ, ವಾರಂಬಳ್ಳಿ ಗ್ರಾಮದ ಮೂಡು ಗರಡಿ ರಸ್ತೆಯ ನಿವಾಸಿ ಸಂತೋಷ ಕುಮಾರ್ ಶೆಟ್ಟಿ(56) ಹಾಗೂ ಕಲ್ಪತರು ಇಂಡಸ್ಟ್ರೀಸ್‌ನ, ಕೋಟೇಶ್ವರ ಹಾಲಾಡಿ ರೋಡ್‌ನ ನಿವಾಸಿ ಕೆ.ನಾಗರಾಜ(62) ಬಂಧಿತ ಆರೋಪಿಗಳು.

ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಧರ್ಮಗಳ ಮಧ್ಯೆ ದ್ವೇಷ ಹರಡಿಸುವಂತಹ ವಿಡಿಯೋ ಹಾಕಿದ ಬಗ್ಗೆ ಇವರಿಬ್ಬರ ವಿರುದ್ಧ ಜ.29ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಮತ್ತು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಅಶೋಕ ಮಾಳಾಬಗಿ, ಸುದರ್ಶನ್ ದೊಡಮನಿ ಹಾಗೂ ಠಾಣಾ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!