ತೊಂಬತ್ತು ದಿನ… 101 ಆನ್ ಲೈನ್ ಕಾರ್ಯಕ್ರಮಗಳು ಪ್ರಧಾನಿ ಮೋದಿ ದಾಖಲೆ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೆಪ್ಟಂಬರ್ ತಿಂಗಳನಿಂದ ನವಂಬರ್ ವರೆಗೆ ಮೂರು ತಿಂಗಳ ಸಮಯದಲ್ಲಿ 101 ಆನ್ ಲೈನ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ಅಂದರೆ ದಿನಕ್ಕೆ ಸರಾಸರಿ ಒಂದಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳಲ್ಲಿ ಪ್ರಧಾನಿ ಪಾಲ್ಗೊಂಡಿದ್ದಾರೆ.
ಆದೇ ರೀತಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಂತ್ರಜ್ಞಾನ ಬಳಸಿಕೊಂಡಿರುವುದು ಶೇ.25 ರಷ್ಟು ಹೆಚ್ಚು. ಪ್ರಮುಖವಾಗಿ ಆನ್ ಲೈನ್ ಕಾರ್ಯಕ್ರಮಗಳಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ, ಕೋವಿಡ್ -19 ಸಾಂಕ್ರಾಮಿಕ ಕುರಿತ ಮುಖ್ಯಮಂತ್ರಿಗಳೊಂದಿಗೆ ಸಮಾವೇಶ, ಅಂತರಾಷ್ಟ್ರೀಯ ನಾಯಕರೊಂದಿಗೆ ಶೃಂಗಸಭೆಗಳು, ಯುವ ಉದ್ಯಮಿಗಳೊಂದಿಗೆ ಸಂವಾದದಂತಹ ವಿವಿಧ ಕಾರ್ಯಕ್ರಮಗಳು ಇದರಲ್ಲಿ ಸೇರಿವೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮಗಳ ಜತೆಗೆ ಅಂತರಿಕ ಸಮಾವೇಶಗಳು ಕೂಡಾ ಗಣನೀಯವಾಗಿ ಹೆಚ್ಚಳಗೊಂಡಿವೆ ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ.