ಮತ್ತೊಂದು ಬ್ಯಾಂಕ್ ಪರವಾನಿಗೆ ರದ್ದು ಮಾಡಿದ ಆರ್ಬಿಐ!
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಮತ್ತೊಂದು ಬ್ಯಾಂಕ್ ನ ಪರವಾನಿಗೆ ರದ್ದು ಪಡಿಸಿದ್ದು, 99ರಷ್ಟು ಗ್ರಾಹಕರ ಠೇವಣಿ ವಾಪಸ್ ಸಿಗುವ ಭರವಸೆ ನೀಡಿದೆ.
ಸಾಕಷ್ಟು ಬಂಡವಾಳ ಮತ್ತು ಗಳಿಸುವ ನಿರೀಕ್ಷೆ ಇಲ್ಲದಿದ್ದರೂ ಆರ್ಥಿಕ ಚಟುವಟಿಕೆ ನಡೆಸುತ್ತಿದ್ದ ದಿ. ಕರಾಡ್ ಜನತಾ ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ಆರ್ಬಿಐ ರದ್ದುಪಡಿಸಿದೆ. ಅಲ್ಲದೆ ಸೋಮವಾರಕ್ಕೆ ಎಲ್ಲ ವ್ಯವಹಾರಗಳನ್ನು ಕೊನೆಗೊಳಿಸುವಂತೆ ಸೂಚನೆ ನೀಡಿದೆ.
ಮಹಾರಾಷ್ಟ್ರದ ಕರಾಡ್ ಮೂಲದ ಈ ಸಹಕಾರಿ ಬ್ಯಾಂಕ್ 1917ರಿಂದ ಸೇವೆ ಆರಂಭಿಸಿತ್ತು. ಪ್ರಸ್ತುತ ಸಂದರ್ಭದಲ್ಲಿ ಬ್ಯಾಂಕ್ ನಡೆಸಲು ಅಗತ್ಯ ಪ್ರಮಾಣದ ಬಂಡವಾಳದ ಕೊರತೆ ಎದುರಿಸುತ್ತಿತ್ತು. ಇದೀಗ ಬ್ಯಾಂಕ್ ಪರವಾನಗಿ ರದ್ದಾಗಿದ್ದು ಆತಂಕಗೊಂಡಿದ್ದ ಗ್ರಾಹಕರಿಗೆ ಆರ್ಬಿಐ ಭರವಸೆ ನೀಡಿದೆ. ಶೇಕಡಾ 99ರಷ್ಟು ಗ್ರಾಹಕರು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ(ಡಿಐಸಿಜಿಸಿ)ದಿಂದ ಠೇವಣಿ ಹಣ ವಾಪಸ್ ಸಿಗಲಿದೆ. ಇನ್ನು ಈ ಹಣಕಾಸು ವಹಿವಾಟನ್ನು ನಗದು ರೂಪದಲ್ಲಿ ನಡೆಸುವುದಕ್ಕೆ ನಿರ್ಬಂದ ಹೇರಿದೆ.
ಬಂಡಳವಾ ಕೊರತೆ ಎದುರಿಸುತ್ತಿರುವ ಬ್ಯಾಂಕ್ ಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿದರೆ ಅದರಿಂದ ಗ್ರಾಹಕರಿಗೆ ತೊಂದರೆಯಾಗುತ್ತದೆ. ಅಲ್ಲದೆ ಈ ಬ್ಯಾಂಕ್ ಅಸ್ತಿತ್ವದಲ್ಲಿರುವುದು ಕೂಡ ಠೇವಣಿದಾರರ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಆರ್ಬಿಐ ಹೇಳಿದೆ.