ಪ್ರಸಾದ್ ನೇತ್ರಾಲಯ: ಉಚಿತ ನೇತ್ರ ಚಿಕಿತ್ಸಾ ಹಾಗೂ ಉಚಿತ ಕನ್ನಡಕ ವಿತರಣಾ ಶಿಬಿರ
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಸವಿನೆನಪಿಗಾಗಿ ಶ್ರೀ ನಿತ್ಯಾನ0ದ ಯೋಗಾಶ್ರಮ ಕೊ0ಡೆವೂರು ಮಠ ಇವರ ಆಶ್ರಯದಲ್ಲಿ -ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಒನ್ ಸೈಟ್ ಎಸ್ಸಿಲಾರ್ ಲಕ್ಸೋಟ್ಟಿಕಾ ಫೌ0ಡೇಶನ್ ಬೆ0ಗಳೂರು, ಡಾ. ದಯಾನ0ದ ಪೈ ಮತ್ತು ಪಿ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಇವರ ಜ0ಟಿ ಆಶ್ರಯದಲ್ಲಿ ಬೆಂಗಳೂರಿನ ದೇವಾಂಗ ಸಂಘದಲ್ಲಿ ಉಚಿತ ನೇತ್ರ ಚಿಕಿತ್ಸಾ ಹಾಗೂ ಉಚಿತ ಕನ್ನಡಕ ವಿತರಣಾ ಶಿಬಿರ ನಡೆಯಿತು.
ಹ0ಪಿ ಹೇಮಕೂಟ ಸ0ಸ್ಥಾನದ ಪರಮಪೂಜ್ಯ ಶ್ರೀ ದಯಾನ0ದಪುರಿ ಸ್ವಾಮೀಜಿ, ಶ್ರೀ ನಿತ್ಯಾನ0ದ ಯೋಗಾಶ್ರಮ ಮಠದ ಶ್ರೀ ಯೋಗಾನ0ದ ಸರಸ್ವತೀ ಸ್ವಾಮೀಜಿ ಅಶೀರ್ವಚನವಿತ್ತರು. ಕೇ0ದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿದರು.
ಕೇ0ದ್ರ ಮಾಹಿತಿ, ಪ್ರಸಾರ ಮತ್ತು ಸ0ಸದೀಯ ವ್ಯವಹಾರ ರಾಜ್ಯ ಸಚಿವ ಡಾ.ಎಲ್.ಮುರುಗನ್, ಬೆ0ಗಳೂರು ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಕೆ.ನಾರಾಯಣ, ಖ್ಯಾತ ಚಲನಚಿತ್ರ ನಟ ಹಾಗೂ ರಾಜ್ಯ ಸಭಾ ಸದಸ್ಯ ಜಗ್ಗೇಶ್, ವಿಧಾನ ಪರಿಷತ್ ಸದಸ್ಯ ಎನ್ ರವಿಕುಮರ್ (ನಿವೃತ್ತ IPS), ಡಾ.ಕೆ.ಸಿ.ರಾಮಮೂರ್ತಿ, ಒನ್ ಸೈಟ್ ಎಸ್ಸಿಲಾರ್ ಲಕ್ಸೋಟ್ಟಿಕಾ ಫೌ0ಡೇಶನ್ ಬೆ0ಗಳೂರು ಇದರ ಚೀಫ್ ಮ್ಯಾನೇಜರ್ ಧರ್ಮಪ್ರಸಾದ್ ರೈ, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬೆಂಗಳೂರು ದೇವಾ0ಗ ಸ0ಘದ ಅಧ್ಯಕ್ಷ ಡಾ.ಜಿ. ರಮೇಶ್, IPS( ನಿವೃತ್ತ) ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪ್ರಸಾದ್ ನೇತ್ರಾಲಯದ ನೇತ್ರ ತಜ್ಞರಾದ ಡಾ.ಮೋಹನ್, ಡಾ.ಪ್ರೇಮ್ ಸಾಗರ್ ಹಾಗೂ ಸಿಬ0ದಿಗಳು ಶಿಬಿರ ನಡೆಸಿಕೊಟ್ಟರು.
ಶಿಬಿರದಲ್ಲಿ 419 ಜನರು ಉಚಿತ ತಪಾಸಣೆಗೆ ಒಳಗಾದರು. ಒಟ್ಟು 267 ಜನರನ್ನು ಉಚಿತ ಕನ್ನಡಕ ವಿತರಣೆಗಾಗಿ ಗುರುತಿಸಿದ್ದು 115 ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಕನ್ನಡಕ ವಿತರಿಸಲಾಯಿತು. 66 ಜನರನ್ನು ಉಚಿತ ಪೊರೆ ಶಸ್ತç ಚಿಕಿತ್ಸೆಗೆ ಗುರುತಿಸಿ, ಬೆ0ಗಳೂರಿನಲ್ಲಿಯೇ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.





