ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ- 25ನೇ ವಾರ್ಷಿಕ  ಮಹಾಸಭೆ

ಮುಂಬಯಿ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಎಲ್ಲ ಕಾರ್ಯಕರ್ತರು ತಮ್ಮ ಜವಾಬ್ಧಾರಿಯನ್ನು ನಿಸ್ವಾರ್ಥವಾಗಿ ನಿರ್ವಹಿಸುತ್ತಿದ್ದಾರೆ. ಮುಂಬಯಿ ಸಮಿತಿ ಹಾಗೂ ಜಿಲ್ಲೆಗಳ ಸಮಿತಿಯ ಎಲ್ಲರೂ ಅವರವರ ಕಾರ್ಯವನ್ನು  ಸಮಿತಿಯ ಹೆಸರಿಗೆ ಧಕ್ಕೆಯಾಗದ ರೀತಿಯಲ್ಲಿ  ಯಶಸ್ವಿಯಾಗಿ ನೆರವೇಸುತ್ತಿರುವುದು ಅಭಿನಂದನೀಯ. ಇದೇ ರೀತಿ ಎಲ್ಲರೊಂದಿಗೆ ಸಹಬಾಳ್ವೆ ಮತ್ತು ಒಗ್ಗಟ್ಟಿನಿಂದ ನಮ್ಮ ಸಂಘಟನೆಯನ್ನು ಮುನ್ನಡೆಸೋಣ. ಕೆಲವೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಕೆಲವು ನಿರ್ಧಾರವನ್ನು ಸಂಸ್ಥಾಪಕರ ಮಾರ್ಗದರ್ಶನದಂತೆ ಕೈಗೊಂಡಿರುವ ಸಾಧ್ಯತೆಯಿದೆ. ಆದರೂ ನಮಗೆ ನಮ್ಮ ಹಿರಿಯ ಸದಸ್ಯರು ಸಲಹೆ ಸೂಚನೆ ನೀಡುದಾದರೆ ಸ್ವಾಗತಾರ್ಹ .ಕಳೆದ 25 ವರ್ಷಗಳಿಂದ ಸಮಿತಿಯು ಜಿಲ್ಲೆಗಳಿಗೆ ವಿದ್ಯುತ್, ಹೆದ್ದಾರಿ, ರೈಲು, ಉದ್ಯೋಗಾವಕಾಶ ನೀಡಿದ್ದು ಜನರು ಇದನ್ನು ಗಮನಿಸಬೇಕಾಗಿದೆ. ನಮ್ಮ ಕಾರ್ಯಚಟುವಟಿಕೆಗಳು ಹೆಚ್ಚುತ್ತಿದ್ದು ಸಮಿತಿಯ ಘಟನೆಯ ತಿದ್ದುಪಡಿಯ ಅಗತ್ಯವಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್  ನುಡಿದರು.

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ 25ನೇ ವಾರ್ಷಿಕ  ಮಹಾಸಭೆಯು ಮುಂಬಯಿ ಸಾಕಿನಾಕಾದ, ಪೆನಿನ್ಸುಲಾ ಗ್ರಾಂಡ್ ಹೋಟೆಲು, ಇಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಯವರ ಉಪಸ್ಥಿತಿಯಲ್ಲಿ, ನಡೆದಿದ್ದು  ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಗತವರ್ಷದ ವಾರ್ಷಿಕ ಮಹಾಸಭೆಯ ವರದಿ ವರದಿಯನ್ನು ಮತ್ತು ಕೋಶಾಧಿಕಾರಿ ಸದಾನಂದ ಆಚಾರ್ಯ ಅವರು ಗತ ವರ್ಷದ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು.

ಸಮಿತಿಯ ಸಲಹೆಗಾರರಾದ ಪ್ರವೀಣ್ ಬೋಜ ಶೆಟ್ಟಿ,  ಸೂರ್ಯಕಾಂತ್ ಜಯ ಸುವರ್ಣ ಮತ್ತು ಲಕ್ಷ್ಮಣ ಪೂಜಾರಿ, ಸಮಿತಿಯಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಹಾಗು ಸದಸ್ಯರು ಉಪಸ್ಥಿತರಿದ್ದರು.

ಸಭಿಕರ ಪರವಾಗಿ ಮಾತನಾಡಿದ ಸಮಿತಿಯ ಉಪಾಧ್ಯಕ್ಷ ಹಾಗೂ ಸಮಿತಿಯ ಘಟನೆಯ ತಿದ್ದುಪಡಿಯ ಪ್ರಮುಖರಾದ ಶ್ರೀನಿವಾಸ ಸಾಫಲ್ಯರು ಎಲ್ಲಾ ಸಮುದಾಯದವರನ್ನು ಒಂದೆಡೆ ಸೇರಿಸಿ, ಒಂದು ಸಂಘಟನೆಯನ್ನು ರೂಪಿಸಿ, ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರನ್ನು ಒಗ್ಗಟ್ಟಿನಿಂದ ಮುಂದಕ್ಕೆ ಕೊಂಡೊಯ್ಯುವ ಕಾರ್ಯ ನಿಜಕ್ಕೂ ಪ್ರಶಂಸನೀಯವಾಗಿದೆ.ಇದಕ್ಕೆ ಪ್ರಮುಖ ಕಾರಣರಾಗಿರುವವರು ನಮ್ಮ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು. ಸಮಿತಿಯು ಯಾವುದೇ ನಿರ್ಣಯವನ್ನು ಕೈಗೊಳ್ಳುವಾಗ, ಅದನ್ನು ಸಮಿತಿಯ ಸಭೆಯಲ್ಲಿ ಮಂಜೂರು ಮಾಡುವ ಸಂಪ್ರದಾಯವಿದ್ದು, ಇದರ ಮೂಲಕ ಎಲ್ಲ ಸದಸ್ಯರು ಅದರ ಬಗ್ಗೆ ಪೂರ್ವ ಮಾಹಿತಿ ಹೊಂದಿರುತ್ತಾರೆ . ಸಮಿತಿಯ ಘಟನೆಯ ತಿದ್ದುಪಡಿಯ ಉದ್ದೇಶ ಹಾಗೂ ಅವಶ್ಯಕತೆ ಕುರಿತು ಸೂಕ್ತವಾದ ಮಾಹಿತಿಯನ್ನು ಸಭೆಯಲ್ಲಿ ನೀಡಿದರು.

ನ್ಯಾ. ಶಶಿಧರ ಕಾಪು, ಉಪಾಧ್ಯಕ್ಷ ಚಂದ್ರಶೇಖರ ಆರ್. ಬೆಳ್ಚಡ, ಸಿಎಸ್ ಗಣೇಶ್, ಸಮಿತಿಯ ವಕ್ತಾರ ದಯಾಸಾಗರ ಚೌಟ, ಮಾತನಾಡುತ್ತ ಸಮಿತಿಯ ಬೆಳ್ಳಿ ಹಬ್ಬ ಸಮಾರಂಭ ಹಾಗೂ ಮುಂದಿನ ಯೋಜನೆ ಬಗ್ಗೆ ಸೂಕ್ತ ಮಾಹಿತಿಯಿತ್ತರು.ದೇವದಾಸ ಕುಲಾಲ್ ಅವರು ಸರ್ವ ಸದಸ್ಯರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಸಿಎಸ್. ಗಣೇಶ್ ಶೆಟ್ಟಿ ವಂದನಾರ್ಪಣೆ ಮಾಡಿದರು.

 ಎಲ್ಲರನ್ನು ಸಂಘಟಿಸಿ ಜಿಲ್ಲೆಯಲ್ಲಿ ಶಾಂತಿ ಕಾಪಾಡುದರೊಂದಿಗೆ ಅಭಿವೃದ್ದಿಗೊಳಿಸುವುದೇ ನಮ್ಮ ಮೂಲ ಉದ್ದೇಶ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ

ನಮ್ಮ ಸಮಿತಿಯಲ್ಲಿರುವವರೆಲ್ಲರೂ ಅವರವರ ಸಮಾಜದ ಸಂಘಟನೆಗಳಲ್ಲಿ ಉನ್ನತ ಪದವಿಯನ್ನು ಅಲಂಕರಿಸಿದವರು. ಮಾತ್ರವಲ್ಲದೇ ನಮ್ಮ ಸಮಿತಿಯ ಎಲ್ಲಾ ಸದಸ್ಯರು ಉನ್ನತ ಮಟ್ಟದ ವ್ಯಾಸಂಗ ಮಾಡಿ ಸುಪ್ರೀಂ ಕೋರ್ಟಿನ ವಕೀಲರಂತಹ ಉನ್ನತ ಮಟ್ಟದ ಹುದ್ದೆಯಲ್ಲಿದ್ದವರು. ಎಲ್ಲಾ ಸಮುದಾಯದವರಿಂದಾಗಿ ಸಮಿತಿಯು ಇಂದು ಗಟ್ಟಿಯಾಗಿದೆ. ಜಿಲ್ಲೆಗಳಲ್ಲಿ ಕೋಮುವಾದ ನಿರ್ಮೂಲನದ ಬಗ್ಗೆ ಸರಕಾರ ಹಾಗೂ ಪೊಲೀಸ್ ಇಲಾಖೆಯ ಸಂಪೂರ್ಣ ಬೆಂಬಲ ನಮಗಿದೆ .ಜಿಲ್ಲೆಗಳ ಅಭಿವೃದ್ಧಿಗೆ ನಾವು ಹಲವಾರು ಯೋಜನೆಗಳನ್ನು ಕೈಗೊಂಡಿದ್ದು  ಅದನ್ನು ಕಾರ್ಯ ರೂಪಕ್ಕೆ ತರಲು  ಕ್ರಿಯಾಶೀಲರಾಗಿದ್ದೇವೆ. ಸಮಿತಿಯು ಯಾವುದೇ  ಅಭಿವೃದ್ಧಿ ಕಾರ್ಯಕ್ರಮದಲ್ಲಿ ತೊಡಗಿದಲ್ಲಿ ಅದನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದೆ. ಇನ್ನು ಮುಂದೆಯೂ ನಾವೆಲ್ಲರೂ ಒಂದಾಗಿ ಜಿಲ್ಲೆಗಳ ಅಭಿವೃದ್ದಿಗೆ ಶ್ರಮಿಸೋಣ ಎಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ  ಸಂಸ್ಥಾಪಕರಾದ  ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ನುಡಿದರು.

Leave a Reply

Your email address will not be published. Required fields are marked *

error: Content is protected !!