ಸಾಮಾಜಿಕ ಶೈಕ್ಷಣಿಕ ಮತ್ತು ಜಾತಿಗಣತಿ ಸಮೀಕ್ಷೆ- ಮರಾಟಿ ಸಮುದಾಯ ಬಾಂಧವರ ಗಮನಕ್ಕೆ
ಉಡುಪಿ: ಕರ್ನಾಟಕ ರಾಜ್ಯ ಸರಕಾರವು ಆಯೋಜಿಸಿರುವ ಸಾಮಾಜಿಕ ಶೈಕ್ಷಣಿಕ ಮತ್ತು ಜಾತಿಗಣತಿ ಸಮೀಕ್ಷೆ 2025 ಸೆಪ್ಟೆಂಬರ್ 22 ರಿಂದ ನಡೆಯಲಿದೆ. ನಿಮ್ಮ ಮನೆಗೆ ಬರುವ ಗಣತಿದಾರರಿಗೆ ಮುಖ್ಯವಾಗಿ ನೀವು ಕೊಡ ಬೇಕಾದ ಮಾಹಿತಿಯ ಮುಖ್ಯ ಅಂಶಗಳು…
ಕಾಲಮ್ ನಂಬರ್ 9ರಲ್ಲಿ ನೀವು ಯಾವ ವರ್ಗಕ್ಕೆ ಸೇರಿದವರು ಎಂಬ ಪ್ರಶ್ನೆಗೆ ಎಸ್.ಟಿ (ಪರಿಶಿಷ್ಟ ಪಂಗಡ)ಎಂದು ನಮೂದಿಸಬೇಕು.ಅದಕ್ಕೆ ಸಂಬಂಧಿಸಿ ಜಾತಿ ಕೋಡ್ ಸಂಖ್ಯೆ C-36 ಮರಾಟಿ (ಸೌತ್ ಕೆನರಾ ಜಿಲ್ಲೆ ) ಎಂಬುದನ್ನು ಕಡ್ಡಾಯವಾಗಿ ಸೂಚಿಸಬೇಕು.
ಗಣತಿದಾರರ ಮೊಬೈಲ್ ಆಪ್ (App) ನಲ್ಲಿ ಮರಾಠಿ ಎಂದು ಇದೆ. ಪರಿಶಿಷ್ಟ ಪಂಗಡದ ವರ್ಗಕ್ಕೆ ಉಪಜಾತಿ ಬರುವುದಿಲ್ಲ.ಆದ್ದರಿಂದ ಯಾವುದೇ ಕಾರಣಕ್ಕೂ ನಾಯ್ಕ, ನಾಯ್ಕ್, ನಾಯಕ, ಮುಂತಾದ ಸಂಭೋಧನೆಯನ್ನು ಉಪಜಾತಿ ಎಂದು ಸೂಚಿಸಬಾರದು.
ಕಾಲಂ ಸಂಖ್ಯೆ 12ರಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದೀರಾ ? ಎಂದಿದೆ. ಇದಕ್ಕೆ ಹೌದು ಎಂದು ಸೂಚಿಸುವುದು. ಉಳಿದ ಪ್ರಶ್ನೆಗಳಿಗೆ ಆಲೋಚಿಸಿ ಸರಿಯಾದ ಉತ್ತರವನ್ನು ನೀಡಿದಲ್ಲಿ ನಮ್ಮ ಸಮುದಾಯದ ನಿಖರವಾದ ಮಾಹಿತಿ ಮತ್ತು ಜಿಲ್ಲೆಯಲ್ಲಿನ ಜನಸಂಖ್ಯೆ ಅಧಿಕೃತವಾಗಿ ನಮೂದಾಗುತ್ತದೆ. ಇದರಿಂದ ಸರಕಾರದ ಸೌಲಭ್ಯಗಳ ಫಲಾನುಭವಿಗಳಾಗುವಲ್ಲಿ ಸಹಕಾರಿ ಆಗುತ್ತದೆ ಎಂದು ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ.ಟಿ ನಾಯ್ಕ್ ಚಾಂತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





